alex Certify
ಕನ್ನಡ ದುನಿಯಾ       Mobile App
       

Kannada Duniya

ಬೇರೊಬ್ಬನಿಗೆ ಚುಂಬಿಸುತ್ತಿದ್ದ ಪ್ರೇಯಸಿ ನೋಡಿ ಆತ ಮಾಡಿದ್ದೇನು?

ಅರ್ಜೆಂಟೈನಾದಲ್ಲಿ ನಡೆದ ಘಟನೆ ಇದು. ಯುವಕನೊಬ್ಬ ಪ್ರೇಯಸಿಯ ವಂಚನೆಯನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾನೆ. ಬೇರೊಬ್ಬನಿಗೆ ಪ್ರೇಯಸಿ ಚುಂಬಿಸುತ್ತಿರುವಾಗ ಪಕ್ಕದಲ್ಲೇ ಕುಳಿತು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾನೆ.ಅದನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾನೆ.

20 ವರ್ಷದ ಮಾರಿಯಾನೋ ಒಬ್ಬಂಟಿಯಾಗಿ ಪಾರ್ಟಿಗೆ ಬಂದಿದ್ದ. ಅಲ್ಲಿದ್ದ ತನ್ನ ಪ್ರಿಯತಮೆಯನ್ನು ನೋಡಿ ಅವನಿಗೆ ಶಾಕ್ ಆಗಿತ್ತು. ಮಾರಿಯಾನೋ ಪಾರ್ಟಿಗೆ ಬಂದಿದ್ದಾನೆ ಅನ್ನೋದು ಆಕೆಗೆ ಗೊತ್ತಿರಲಿಲ್ಲ. ಅವಳು ಬೇರೊಬ್ಬ ಯುವಕನೊಂದಿಗೆ ಪಾರ್ಟಿ ಎಂಜಾಯ್ ಮಾಡುತ್ತಿದ್ಲು.

ಸಹನೆ ಕಳೆದುಕೊಳ್ಳದ ಮಾರಿಯಾನೋ ಅವಳ ಚಲನವಲನ ಗಮನಿಸುತ್ತಿದ್ದ. ಮೈಮರೆತಿದ್ದ ಆಕೆ ಪ್ರಿಯಕರನಿಗೆ ವಂಚಿಸಿ ಬೇರೊಬ್ಬನ ತೆಕ್ಕೆಯಲ್ಲಿದ್ಲು, ಅವನಿಗೆ ಚುಂಬಿಸುತ್ತಿದ್ಲು. ಆ ಫೋಟೋವನ್ನು ಮಾರಿಯಾನೋ ಟ್ವಿಟ್ಟರ್ ನಲ್ಲಿ ಹಾಕ್ತಿದ್ದಂತೆ ಕ್ಷಮೆ ಕೇಳಿದ್ದಾಳೆ.

ಕುಡಿದ ನಶೆಯಲ್ಲಿ ಆ ರೀತಿ ಮಾಡಿದ್ದೇನೆ. ನಿನ್ನನ್ನೇ ಪ್ರೀತಿಸ್ತೇನೆ ಅಂತೆಲ್ಲಾ ಹೇಳಿದ್ದಾಳೆ. ಆದ್ರೆ ಪ್ರತ್ಯಕ್ಷವಾಗಿ ಎಲ್ಲವನ್ನೂ ನೋಡಿದ್ದ ಮಾರಿಯಾನೋ ಅವಳನ್ನು ಕ್ಷಮಿಸಿಲ್ಲ. ಬ್ರೇಕಪ್ ಮಾಡಿಕೊಂಡಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...