alex Certify
ಕನ್ನಡ ದುನಿಯಾ       Mobile App
       

Kannada Duniya

ಒಂಟಿ ಜೀವಕ್ಕೆ ಕುರಿಗಳೇ ಸ್ನೇಹಿತರು

alone6ಯಾರೂ ಇಲ್ಲದ ಊರಿನಲ್ಲಿ ಒಬ್ಬರೆ ಇರೋದು ಅಷ್ಟು ಸುಲಭವಲ್ಲ. ಒಂದು, ಎರಡು ದಿನವಾದ್ರೆ ಹೇಗೋ ಸಮಯ ಕಳೆಯಬಹುದು. ಆದ್ರೆ ವರ್ಷಾನುಗಟ್ಟಲೆ ಯಾರ ಮುಖವನ್ನೂ ನೋಡದೆ ಒಂಟಿಯಾಗಿ ಹಳ್ಳಿಯೊಂದರಲ್ಲಿ ವಾಸಿಸೋದು ಅಸಾಧ್ಯ. ಆದ್ರೆ ಚೀನಾದ ಒಂದು ಊರಿನಲ್ಲಿ 10 ವರ್ಷಗಳಿಂದ ವ್ಯಕ್ತಿಯೊಬ್ಬ ಒಂಟಿಯಾಗಿ ಜೀವನ ನಡೆಸುತ್ತಿದ್ದಾನೆ.

ಚೀನಾದ ಗನ್ಸು ರಾಜ್ಯದ Shuanshanse ಎಂಬ ಗ್ರಾಮದಲ್ಲಿ ಲಿಯು ಎಂಬ ವ್ಯಕ್ತಿ ಕಳೆದ 10 ವರ್ಷಗಳಿಂದ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಾನೆ. ಹಿಂದೆ ಈ ಗ್ರಾಮದಲ್ಲಿ 20 ಕ್ಕೂ ಹೆಚ್ಚು ಮಂದಿ ನೆಲೆಸಿದ್ದರು. ಉದ್ಯೋಗದ ಹುಡುಕಾಟ ಹಾಗೂ ಉತ್ತಮ ಜೀವನವನ್ನು ಅರಸಿ ಜನರು ಬೇರೆ ಊರುಗಳಿಗೆ ಹೋಗಿದ್ದಾರೆ.

ಕೆಲ ವರ್ಷಗಳವರೆಗೆ ಲಿಯು ತನ್ನ ತಾಯಿ ಹಾಗೂ ಸಹೋದರನೊಂದಿಗೆ ಈ ಗ್ರಾಮದಲ್ಲಿ ವಾಸವಾಗಿದ್ದ. ಆದ್ರೆ ಅವರ ಮರಣದ ನಂತ್ರ ಈಗ ಒಬ್ಬಂಟಿಯಾಗಿದ್ದಾನೆ. ಗ್ರಾಮ ತೊರೆಯುವಂತೆ ಲಿಯುಗೆ ಅನೇಕರು ಸಲಹೆ ನೀಡಿದ್ದಾರೆ. ಆದ್ರೆ ಲಿಯುಗೆ ಇದು ಇಷ್ಟವಿಲ್ಲವಂತೆ. ಆಹಾರ ಹಾಗೂ ನೀರಿಗಾಗಿ ಪ್ರತಿ ದಿನ ಲಿಯು, ಕಿಲೋಮೀಟರ್ ದೂರ ನಡೆದುಕೊಂಡು ಹೋಗ್ತಾನೆ. ಆದ್ರೂ ಸೋತಿಲ್ಲ. ಗ್ರಾಮದಲ್ಲಿ ಒಂಟಿಯಾಗಿರುವುದರಿಂದ ಕೆಲವೊಮ್ಮೆ ಭಯವಾಗುತ್ತದೆಯಂತೆ. ಕುರಿಗಳನ್ನು ಸಾಕಿರುವ ಲಿಯು, ಅವುಗಳ ಆರೈಕೆಯಲ್ಲಿ ದಿನ ಕಳೆಯುತ್ತಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...