alex Certify
ಕನ್ನಡ ದುನಿಯಾ       Mobile App
       

Kannada Duniya

ಎಚ್ಚರಿಕೆ ಫಲಕಕ್ಕೂ ಬೆಲೆ ಇಲ್ಲಾ ಅಂದ್ರೆ ಹೀಗೆ ಆಗೋದು…!

ಅಪಾಯಕಾರಿ ಸ್ಥಳಗಳಲ್ಲಿ ಎಷ್ಟೇ ಎಚ್ಚರಿಕೆಯ ಫಲಕಗಳು ಕಂಡು ಬಂದ್ರೂ, ಅದನ್ನೂ ಲೆಕ್ಕಿಸದೆ ಒಂದು ಕೈ ನೋಡಿ ಬಿಡೋಣ ಎಂಬ ಜನರಿದ್ದಾರೆ. ಅಲ್ಲಿ ಹೋಗಬೇಡಿ ಎಂದರೆ, ಹೋದ್ರೆ, ಏನಾಗುತ್ತದೆ ಎಂದು ಪ್ರಶ್ನಿಸುವವರೂ ಇದ್ದಾರೆ. ಬರೀ ಪ್ರಶ್ನಿಸಿದ್ರೆ ಓಕೆ, ಅಲ್ಲಿಗೆ ಹೋಗಿ ನರಕಯಾತನೆ ಪಟ್ಟ ಮೇಲೆ ಮಾಡಿದ ತಪ್ಪಿನ ಅರಿವು ಆಗುತ್ತದೆ.

ಇಷ್ಟೆಲ್ಲಾ ಕಥೆ ಹೇಳಲು ಒಂದು ಕಾರಣ ಇದೆ. ಹೌದು….ಕ್ಯಾಲಿಫೋರ್ನಿಯಾದ ಪ್ರಾಣಿ ಸಂಗ್ರಹಾಲಯದಲ್ಲಿ ಒಬ್ಬ ವ್ಯಕ್ತಿ ಎಚ್ಚರಿಕೆಯ ನಾಮಫಲಕ ಲೆಕ್ಕಿಸದೆ, ಹೋಗಿದ್ದರಿಂದ ಸಿಂಹದ ದಾಳಿಗೆ ತುತ್ತಾಗಿ, ಕಾಲಿಗೆ ಗಂಭೀರ ಗಾಯ ಮಾಡಿಕೊಂಡಿದ್ದಾನೆ. ಫ್ರೆಸ್ನೊ ಚಾಫೆ ಝೂದಲ್ಲಿ ಈ ಘಟನೆ ನಡೆದಿದ್ದು, ಆ ವ್ಯಕ್ತಿಯನ್ನು ಈಗ ಬಂಧಿಸಲಾಗಿದೆ.

ಸಿಂಹದಿಂದ ಕಾಲು ಕಚ್ಚಿಸಿಕೊಂಡಾತನನ್ನು ಜೂಲಿಯೊ ಮೆಂಡೆಜ್ ಎಂದು ಗುರುತಿಸಲಾಗಿದೆ. ಮೆಂಡೆಜ್ ನಿಷೇಧಿತ ಸ್ಥಳಕ್ಕೆ ಎಂಟ್ರಿ ನೀಡಿ, ಸಿಂಹದ ದಾಳಿಗೆ ಒಳಗಾಗಿದ್ದಾನೆ. ಅಲ್ಲದೆ ಈ ಘಟನೆ ಬೇರೆಯವರಿಗೆ ಗೊತ್ತಾಗಬಾರದೆಂದು, ಭದ್ರತಾ ಸಿಬ್ಬಂದಿ ಕಣ್ಣು ತಪ್ಪಿಸಿ 18 ಅಡಿ ಎತ್ತರದ ಜಾಲರಿ ದಾಟಲು ಪ್ರಯತ್ನ ಪಟ್ಟಿದ್ದಾನೆ. ಆದ್ರೆ, ಸಿಬ್ಬಂದಿ ಆತನನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ರು. ಜೂಲಿಯೊ ಮೆಂಡೆಜ್ ಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ನಿಷೇಧಿತ ಪ್ರದೇಶ ಪ್ರವೇಶಿಸಿದ ಆರೋಪದ ಮೇಲೆ ಆತನ ವಿರುದ್ದ ಈಗ ಕ್ರಮ ಕೈಗೊಳ್ಳಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...