alex Certify
ಕನ್ನಡ ದುನಿಯಾ       Mobile App
       

Kannada Duniya

44 ವರ್ಷಗಳ ಕಾಲ ಶಿಶ್ನವಿಲ್ಲದೆ ಜೀವಿಸಿದ್ದ ಈ ವ್ಯಕ್ತಿಗೆ ನಡೀತು ಚಿಕಿತ್ಸೆ

ಲಂಡನ್ ನ 44 ವರ್ಷದ ಆಂಡ್ರ್ಯೂ ವಾರ್ಡ್ಲೆಗೆ ಅನನ್ಯ ಹಾಗೂ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆದಿದೆ. ಆಂಡ್ರ್ಯೂ bladder exstrophy ಹೆಸರಿನ ಖಾಯಿಲೆಯಿಂದ ಬಳಲುತ್ತಿದ್ದ. ಹಾಗಾಗಿ ಆತ ಖಾಸಗಿ ಅಂಗವಿಲ್ಲದೆ ಜನಿಸಿದ್ದ. 2 ಕೋಟಿ ಜನರಲ್ಲಿ ಒಬ್ಬರಿಗೆ ಈ ಖಾಯಿಲೆ ಕಾಣಿಸಿಕೊಳ್ಳುತ್ತದೆ. bladder exstrophy ಕಾರಣದಿಂದ ಕಿಡ್ನಿ ಸಮಸ್ಯೆ ಕೂಡ ಕಾಣಿಸಿಕೊಂಡಿತ್ತು.

ಆಂಡ್ರ್ಯೂ bladder exstrophy ಖಾಯಿಲೆಯಿಂದ ಬೇಸತ್ತು ಆತ್ಮಹತ್ಯೆಗೆ ಯೋಚನೆ ಮಾಡಿದ್ದ. ಈ ಮಧ್ಯೆ ಲಂಡನ್ ನ ವೈದ್ಯರು ಆಂಡ್ರ್ಯೂಗೆ ಬಯೋನಿಕ್ ಪೆನಸ್ ಬಗ್ಗೆ ಹೇಳಿದ್ರು. 45 ಲಕ್ಷ ರೂಪಾಯಿ ವೆಚ್ಚವಾಗುತ್ತದೆ ಎಂದು ವೈದ್ಯರು ಹೇಳಿದ್ದರು. ಶುಕ್ರವಾರ ಆಂಡ್ರ್ಯೂಗೆ ಶಿಶ್ನ ಕಸಿ ನಡೆದಿದೆ.

ಲಂಡನ್ ನ ಮೂತ್ರಶಾಸ್ತ್ರಜ್ಞ ಡೇವಿಡ್ ರಾಲ್ಫ್ ಬಯೋನಿಕ್ ಶಿಶ್ನ ರಚಿಸಿ ಅಳವಡಿಸಿದ್ದಾರೆ. ತುಂಬಾ ಕೀಳರಿಮೆಗೊಳಗಾಗಿದ್ದ ಆಂಡ್ರ್ಯೂ ತನ್ನಂತಿರುವ ವ್ಯಕ್ತಿಗಳ ಹುಡುಕಾಟ ನಡೆಸಿದ್ದ. ಐದು ಮಂದಿ ಸಿಕ್ಕಿದ್ದರಂತೆ. ಅವ್ರೂ ಕೂಡ ಆತ್ಮಹತ್ಯೆಗೆ ಯೋಚನೆ ಮಾಡಿದ್ದರಂತೆ. ಈ ಚಿಕಿತ್ಸೆ ನಂತ್ರ ಈ ಖಾಯಿಲೆಯಿಂದ ಬಳಲುವ ವ್ಯಕ್ತಿಗಳಿಗೆ ನೆರವಾಗಲು ಆಂಡ್ರ್ಯೂ ಮುಂದಾಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...