alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ಭೇಟಿಯಲ್ಲೇ ಫೇಸ್ಬುಕ್ ಸ್ನೇಹಿತೆ ಮೇಲೆ ರೇಪ್

ದಕ್ಷಿಣ ಆಫ್ರಿಕಾದಲ್ಲಿ ಫೇಸ್ಬುಕ್ ಸ್ನೇಹಿತನೊಬ್ಬ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಫೇಸ್ಬುಕ್ ನಲ್ಲಿ ಸ್ನೇಹ ಬೆಳಸಿ ಮೂರು ದಿನ ಕಳೆದ ನಂತ್ರ ಮೊದಲ ಭೇಟಿಯಲ್ಲಿಯೇ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಆಕೆ ಫೋನ್ ಕಿತ್ತುಕೊಂಡಿದ್ದಲ್ಲದೆ ಹ್ಯಾಂಡ್ ಬ್ಯಾಗನ್ನು ಕೂಡ ಕಿತ್ತೆಸೆದಿದ್ದಾನೆ.

ಬಲಿಪಶು ಮಹಿಳೆ ಗೌಟೆಂಗ್ ಪ್ರಾಂತ್ಯದ ಸೊವೆಟೊ ನಿವಾಸಿಯಾಗಿದ್ದಾಳೆ. 25 ವರ್ಷದ ಮಹಿಳೆ ಎರಡು ಮಕ್ಕಳ ತಾಯಿಯಂತೆ. ಇಬ್ಬರು ಮೂರು ದಿನಗಳ ಹಿಂದಷ್ಟೇ ಫೇಸ್ಬುಕ್ ನಲ್ಲಿ ಸ್ನೇಹ ಬೆಳೆಸಿದ್ದರು. ಫೇಸ್ಬುಕ್ ಚಾಟ್ ನಲ್ಲಿ ಕೂಡ ಇವರಿಬ್ಬರು ಯಾವುದೇ ಸಂದೇಶ ಕಳುಹಿಸಿಕೊಂಡಿಲ್ಲ.

ಶಾಪಿಂಗ್ ಮಾಲ್ ಒಂದರಲ್ಲಿ ಸಿಗುವಂತೆ ಆರೋಪಿ ಕೇಳಿದ್ದಾನೆ. ಮಹಿಳೆ ಭೇಟಿ ಮಾಡಿದ್ದಲ್ಲದೆ ಆತನ ಜೊತೆ ಊಟ ಮಾಡಿದ್ದಾಳೆ. ನಂತ್ರ ಮನೆಗೆ ಬಿಡುವ ನೆಪ ಹೇಳಿ ಕಾರಿನಲ್ಲಿ ಕರೆದೊಯ್ದ ಆರೋಪಿ ಜನರಿಲ್ಲದ ಜಾಗದಲ್ಲಿ ಕಾರು ನಿಲ್ಲಿಸಿ ಅತ್ಯಾಚಾರವೆಸಗಿದ್ದಾನೆ. ನಂತ್ರ ಮಹಿಳೆಯನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾನೆ. ಸುಮಾರು 1 ಗಂಟೆ ನಡೆದು ಬಂದ ಮಹಿಳೆಗೆ ನಂತ್ರ ವ್ಯಕ್ತಿಯೊಬ್ಬರು ಸಹಾಯ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...