alex Certify
ಕನ್ನಡ ದುನಿಯಾ       Mobile App
       

Kannada Duniya

OMG! ಹೆಚ್ ಐ ವಿ ಪರೀಕ್ಷೆ ಮಾಡದ ಆಸ್ಪತ್ರೆಗೆ 127 ಕೋಟಿ ದಂಡ

ಕೆಲವೊಮ್ಮೆ ನಂಬಲು ಕಷ್ಟವಾಗುವಂತಹ ಆಘಾತಕಾರಿ ಘಟನೆಗಳು ನಡೆಯುತ್ತವೆ. ಅಂಥಹದ್ದೇ ಘಟನೆಯೊಂದು ಈಗ ಬೆಳಕಿಗೆ ಬಂದಿದೆ. ಆಸ್ಪತ್ರೆಯೊಂದರ ಮೇಲೆ 127 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ.

ಮೂರು ವರ್ಷಗಳ ಹಿಂದೆ ಬೊಸ್ಟನ್ ನಿವಾಸಿ  ಸೀನ್ ಸ್ಟೆಪ್ಫೋರ್ಡ್ ಕೆಲವೊಂದು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿದ್ದ. ಅದ್ರಲ್ಲಿ ಹೆಚ್ ಐ ವಿ ಪರೀಕ್ಷೆ ಕೂಡ ಸೇರ್ಪಡೆಯಾಗಿತ್ತು. ಸೀನ್ ಗೆ ಹೆಚ್ ಐ ವಿ ಲಕ್ಷಣಗಳಿಲ್ಲ ಎನ್ನುವ ಕಾರಣಕ್ಕೆ ವೈದ್ಯರು ಸೀನ್ ಸ್ಟೆಪ್ಫೋರ್ಡ್ಗೆ ಹೇಳದೆ ಹೆಚ್ ಐ ವಿ ಟೆಸ್ಟ್ ರದ್ದು ಮಾಡಿದ್ದರು.

ಆದ್ರೆ ಮೂರು ವರ್ಷಗಳ ಬಳಿಕ ಸೀನ್ ಸ್ಟೆಪ್ಫೋರ್ಡ್ ಬೇರೆ ವೈದ್ಯರ ಸಲಹೆ ಮೇರೆಗೆ ಹೆಚ್ ಐ ವಿ ಪರೀಕ್ಷೆ ಮಾಡಿಸಿದ್ದಾನೆ. ಹೆಚ್ ಐ ವಿ ಪಾಸಿಟಿವ್ ಬಂದಿದ್ದಲ್ಲದೆ ಏಡ್ಸ್ ಅಪಾಯ ಹೆಚ್ಚಿದೆ. ಈ ಮಧ್ಯೆ ಮೂರು ವರ್ಷಗಳ ಹಿಂದೆ ಹೆಚ್ ಐ ವಿ ಪರೀಕ್ಷೆ ಮಾಡದ ಆಸ್ಪತ್ರೆ ವಿರುದ್ಧ ಕೋರ್ಟ್ ನಲ್ಲಿ ದೂರು ಸಲ್ಲಿಸಿದ್ದ.

ವಿಚಾರಣೆ ನಡೆಸಿದ ಕೋರ್ಟ್ ಆಸ್ಪತ್ರೆಗೆ ದಂಡ ವಿಧಿಸಿದೆ. 126 ಕೋಟಿ 84 ಲಕ್ಷ 4 ಸಾವಿರ ರೂಪಾಯಿ ಅಂದ್ರೆ 18.4ಮಿಲಿಯನ್ ಡಾಲರ್ ದಂಡ ವಿಧಿಸಿದೆ. ವಿದೇಶಗಳಲ್ಲಿ ಸಾಮಾನ್ಯವಾಗಿ 13 ರಿಂದ 64 ವರ್ಷದ ಜನರು ಕಡಿಮೆ ಎಂದ್ರೂ ಒಂದು ಬಾರಿ ಹೆಚ್ ಐ ವಿ ಪರೀಕ್ಷೆ ಮಾಡಿಸ್ತಾರೆ. ಅಪಾಯವಿದ್ರೆ ಪದೇ ಪದೇ ಹೆಚ್ ಐ ವಿ ಪರೀಕ್ಷೆ ಮಾಡ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...