alex Certify
ಕನ್ನಡ ದುನಿಯಾ       Mobile App
       

Kannada Duniya

ಈತನ ಇಂಗ್ಲೀಷ್ ನೋಡಿ ಕಾಲೆಳೆಯುತ್ತಿದ್ದಾರೆ ನೆಟ್ಟಿಗರು

ಕೇಂದ್ರದಲ್ಲಿ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಬಳಿಕ ವಿದೇಶಾಂಗ ಇಲಾಖೆ ಜವಾಬ್ದಾರಿ ಹೊತ್ತ ಸುಷ್ಮಾ ಸ್ವರಾಜ್‌ ಹಲವು ಬಾರಿ, ಟ್ವೀಟ್‌ ಮೂಲಕ ನೋವು ಹೇಳಿಕೊಂಡವರ ನೆರವಿಗೆ ಧಾವಿಸಿದ್ದಾರೆ. ಆದರೆ ಈ ಬಾರಿ ಅರ್ಥವಾಗದ ಇಂಗ್ಲೀಷ್‌ನಲ್ಲಿ ಸಹಾಯ ಕೇಳಿದ ಯುವಕನ ನೆರವಿಗೆ ಬಂದಿರುವುದಕ್ಕೆ ನೆಟ್ಟಿಗರು ಶಹಬಾಶ್‌ಗಿರಿ ನೀಡಿದ್ದಾರೆ.

ಹೌದು, ಪಂಜಾಬ್‌ ಮೂಲದ ಯುವಕ ಅರ್ಧಬರ್ದ ಇಂಗ್ಲೀಷ್‌ನಲ್ಲಿ ಮಲೇಷಿಯಾದಲ್ಲಿರುವ ತನ್ನ ಸ್ನೇಹಿತನಿಗೆ ಆಗಿರುವ ಕಷ್ಟದ ಬಗ್ಗೆ ಬರೆದು ಸುಷ್ಮಾ ಸ್ವರಾಜ್‌ ಅವರಿಗೆ ಟ್ಯಾಗ್ ಮಾಡಿದ್ದಾನೆ. ಮಲೇಷಿಯಾದಲ್ಲಿ ಹುಷಾರಿಲ್ಲದ ಯುವಕನನ್ನು ವಾಪಾಸು ಭಾರತಕ್ಕೆ ಕರೆದುಕೊಂಡು ಬರಲು, ಅಧಿಕಾರಿಗಳು ಬಿಡುತ್ತಿಲ್ಲ. ಸಹಾಯ ಮಾಡಬೇಕು ಎಂದು ತಪ್ಪು ತಪ್ಪಾಗಿ ಇಂಗ್ಲೀಷ್‌ನಲ್ಲಿ ಮನವಿ ಮಾಡಿದ್ದ. ಇದಕ್ಕೆ ಟ್ವೀಟರ್‌ನಲ್ಲಿ ಅನೇಕರು ಕಾಲೆಳೆದಿದ್ದರು.

ಆದರೆ ಇದಕ್ಕೆ ಸ್ಪಂದಿಸಿರುವ ಸುಷ್ಮಾ ಸ್ವರಾಜ್‌ ನನಗೆ ಅವರ ಇಂಗ್ಲೀಷ್‌ ಅರ್ಥವಾಗಿದೆ. ಅವರ ಸಮಸ್ಯೆಗೆ ಪರಿಹಾರವನ್ನು ಕೊಡಿಸುವ ಕೆಲಸ ಮಾಡುತ್ತೇನೆ ಎನ್ನುವ ಮೂಲಕ ನೆಟ್ಟಿಗರಿಗೆ ಅಚ್ಚರಿ ಮೂಡಿಸಿದ್ದಾರೆ. ಒಂದೆಡೆ ಟ್ವೀಟ್‌ ಖಾತೆದಾರರು, ಯುವಕನಿಗೆ ಸರಿಯಾಗಿ ಇಂಗ್ಲೀಷ್‌ ಅಥವಾ ಹಿಂದಿಯಲ್ಲಿ ಬರೆಯಲು ಟ್ರೋಲ್‌ ಮಾಡುತ್ತಿದ್ದರೆ, ಇನ್ನೊಂದೆಡೆ ಈ ರೀತಿಯ ಸನ್ನಿವೇಶದಲ್ಲಿಯೂ ಯುವಕನ ನೆರವಿಗೆ ಧಾವಿಸಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಇದೀಗ ಈ ಯುವಕನ ಟ್ವೀಟ್‌ ವೈರಲ್‌ ಆಗಿದೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಶಸ್ಸು ಕಾಣಲಿದೆಯಾ ಕಾಂಗ್ರೆಸ್-ಜೆಡಿಎಸ್ ಮೈತ್ರಿ?

    View Results

    Loading ... Loading ...