alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸರ ಸಮೇತ ಕಾರನ್ನಪಹರಿಸಲು ಯತ್ನಿಸಿದ ಭೂಪ

ಜಪಾನ್ ನಲ್ಲಿ ಪೊಲೀಸ್ ಅಧಿಕಾರಿಗಳಿದ್ದ ಕಾರನ್ನೇ ಕದಿಯಲು ಹೋಗಿ ಖದೀಮನೊಬ್ಬ ಸಿಕ್ಕಿಬಿದ್ದಿದ್ದಾನೆ. 23 ವರ್ಷದ ಯುವಕ ಉಶಿಯೊ ಸಟೊ ಎಂಬಾತನನ್ನು ಪೊಲೀಸರು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಅದು ಪೊಲೀಸರ ಕಾರಿರಬಹುದು ಅನ್ನೋ ಊಹೆ ಕೂಡ ಕಳ್ಳನಿಗಿರಲಿಲ್ಲ.

ವಾಹನದ ಮೇಲೆ ಜಪಾನ್ ಪೊಲೀಸರ ಚಿಹ್ನೆಯನ್ನೂ ಹಾಕಿರಲಿಲ್ಲ. ಪಾರ್ಕಿಂಗ್ ಲಾಟ್ ನಲ್ಲಿ ಕಾರನ್ನು ನಿಲ್ಲಿಸಲಾಗಿತ್ತು. ವಾಹನವನ್ನು ಲಾಕ್ ಕೂಡ ಮಾಡಿರಲಿಲ್ಲ. ಯಾಕಂದ್ರೆ ಪೊಲೀಸ್ ಅಧಿಕಾರಿಗಳು ವಾಹನದೊಳಗೆ ಕುಳಿತಿದ್ರು. ಕಾರನ್ನು ಲಾಕ್ ಮಾಡಿಲ್ಲ ಅನ್ನೋದನ್ನಷ್ಟೇ ಕಳ್ಳ ಗಮನಿಸಿದ್ದ.

ಕಾರಿನೊಳಗೆ ಯಾರೋ ಇದ್ದಾರೆ ಅನ್ನೋದು ಅವನಿಗೆ ಗೊತ್ತಿರಲಿಲ್ಲ. ನಿಧಾನವಾಗಿ ಕಾರನ್ನು ಅಲ್ಲಿಂದ ಎಗರಿಸಿಕೊಂಡು ಹೋಗಲು ಸ್ಕೆಚ್ ಹಾಕಿ ಬಂದಿದ್ದ. ಒಳಗಿದ್ದ ಪೊಲೀಸರನ್ನು ನೋಡ್ತಿದ್ದಂತೆ ಓಡಿ ಹೋಗಲು ಪ್ರಯತ್ನಿಸಿದ್ದಾನೆ. ಆದ್ರೆ ಪೊಲೀಸರು ಅವನನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...