alex Certify
ಕನ್ನಡ ದುನಿಯಾ       Mobile App
       

Kannada Duniya

‘ನೈಜೀರಿಯಾ ಪ್ರಿನ್ಸ್’ ಇ ಮೇಲ್ ವಂಚಕ ಅರೆಸ್ಟ್

‘ನೈಜೀರಿಯಾ ಪ್ರಿನ್ಸ್’ ಇ ಮೇಲ್ ಹೆಸರಿನಲ್ಲಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ವ್ಯಕ್ತಿಯನ್ನು ಅಮೆರಿಕಾದ ಸ್ಲಿಡೆಲ್ ಪೊಲೀಸರು ಲೂಸಿಯಾನಾದಲ್ಲಿ ಬಂಧಿಸಿದ್ದಾರೆ. ಬಂಧಿತ ನೈಜೀರಿಯಾ ಪ್ರಜೆಯಲ್ಲವೆಂದು ಪೊಲೀಸರು ತಿಳಿಸಿದ್ದಾರೆ.

ಮಿಲಿಯನ್ ಡಾಲರ್ ಹಣ ನಿಮಗೆ ಬಹುಮಾನವಾಗಿ ಬಂದಿದೆ ಎಂದು ಈ ವಂಚಕ ‘ನೈಜೀರಿಯಾ ಪ್ರಿನ್ಸ್’ ಎಂಬ ಹೆಸರಿನಲ್ಲಿ ಇ ಮೇಲ್ ಕಳುಹಿಸುತ್ತಿದ್ದ. ಬಳಿಕ ಬಹುಮಾನದ ಆಮಿಷಕ್ಕೆ ಬಲಿಯಾದವರು ತಮ್ಮ ಬ್ಯಾಂಕ್ ವಿವರ ಸೇರಿದಂತೆ ವೈಯಕ್ತಿಕ ಮಾಹಿತಿಗಳನ್ನು ಈತನಿಗೆ ರವಾನಿಸುತ್ತಿದ್ದು, ಇದನ್ನು ಬಳಸಿಕೊಂಡು ತನ್ನ ಖಾತೆಗೆ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದನೆನ್ನಲಾಗಿದೆ.

ಈತ ಒಂದಷ್ಟು ಹಣವನ್ನು ನೈಜೀರಿಯಾದ ಕೆಲ ವ್ಯಕ್ತಿಗಳಿಗೆ ವರ್ಗಾವಣೆ ಮಾಡಿದ್ದು, ಈತನ ವಂಚನೆಯಲ್ಲಿ ಕೆಲ ನೈಜೀರಿಯಾ ಪ್ರಜೆಗಳೂ ಭಾಗಿಯಾಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದ್ದು, ಬಹುಮಾನದ ಆಮಿಷ ತೋರಿ ಬರುವ ಇ ಮೇಲ್ ಗಳಿಗೆ ಪ್ರತಿಕ್ರಿಯಿಸಬಾರದೆಂದು ಪೊಲೀಸರು ಸೂಚನೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...