alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್! ಅತಿಯಾಗಿ ಎನರ್ಜಿ ಡ್ರಿಂಕ್ಸ್ ಕುಡಿದವನ ಸ್ಥಿತಿ ಹೇಗಾಗಿದೆ ನೋಡಿ….

ಅತಿಯಾದ್ರೆ ಅಮೃತವೂ ವಿಷವಾಗುತ್ತೆ ಅನ್ನೋ ಮಾತೇ ಇದೆ. ವ್ಯಕ್ತಿಯೊಬ್ಬ ಅತಿಯಾಗಿ ಎನರ್ಜಿ ಡ್ರಿಂಕ್ಸ್ ಕುಡಿದು, ಪ್ರಾಣಕ್ಕೇ ಸಂಚಕಾರ ತಂದುಕೊಂಡಿದ್ದ. ಆತನ ತಲೆಬುರುಡೆಯಲ್ಲಿ ಈಗ ದೊಡ್ಡದೊಂದು ರಂಧ್ರವೇ ಆಗಿಬಿಟ್ಟಿದೆ. ಆತನ ಪತ್ನಿ ಗಂಡನಿಗಾದ ದುಃಸ್ಥಿತಿ, ಕುಟುಂಬ ಎದುರಿಸಿದ ಕಷ್ಟಗಳ ಬಗ್ಗೆ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾಳೆ.

ಆಸ್ಟಿನ್ ಗೆ ಕೆಲಸದ ಒತ್ತಡ ಜಾಸ್ತಿ ಇತ್ತು. ಓವರ್ ಟೈಂ ಮಾಡಬೇಕಾದಾಗ್ಲೆಲ್ಲ ಆತ ಎನರ್ಜಿ ಡ್ರಿಂಕ್ಸ್ ಕುಡಿಯುತ್ತಿದ್ದ. ಹೀಗೆ ಎನರ್ಜಿ ಡ್ರಿಂಕ್ಸ್ ಅವನಿಗೆ ಒಂದು ಚಟವಾಗಿ ಮಾರ್ಪಟ್ಟಿತ್ತು. ಆಸ್ಟಿನ್ ಪತ್ನಿ ಬ್ರಿಯಾನಾ ಗರ್ಭಿಣಿಯಾಗಿದ್ಲು, ಮನೆಯವರೆಲ್ಲ ಹೊಸ ಅತಿಥಿಯ ಆಗಮನದ ಖುಷಿಯಲ್ಲಿದ್ರು.

ಆದ್ರೆ ಆ ದಿನ ಬೆಳಗ್ಗೆ ಬ್ರಿಯಾನಾಳನ್ನು ಎಬ್ಬಿಸಿದ ಅತ್ತೆ ಆಸ್ಟಿನ್ ಗೆ ಅಪಘಾತವಾಗಿದೆ, ಆತ ಆಸ್ಪತ್ರೆಯಲ್ಲಿದ್ದಾನೆ ಅನ್ನೋ ಶಾಕಿಂಗ್ ಸುದ್ದಿ ಕೊಟ್ಟಿದ್ಲು. ಆಸ್ಟಿನ್ ಗೆ ಅಪಘಾತವಾಗಿರಲಿಲ್ಲ, ಬದಲಾಗಿ ಬ್ರೇನ್ ಹೆಮರೇಜ್ ಸಂಭವಿಸಿತ್ತು. ಅದಕ್ಕೆ ಕಾರಣ ಏನ್ ಗೊತ್ತಾ? ಅತಿಯಾದ ಎನರ್ಜಿ ಡ್ರಿಂಕ್ಸ್ ಸೇವನೆ.

ಖುದ್ದು ವೈದ್ಯರೇ ಇದನ್ನು ಸ್ಪಷ್ಟಪಡಿಸಿದ್ದಾರೆ. ಬ್ರೇನ್ ಹೆಮರೇಜ್ ಬಳಿಕ ಆಸ್ಟಿನ್ ಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ನಂತರ 15 ದಿನಗಳ ಕಾಲ ಆತ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದ. ಆ ಸಮಯದಲ್ಲಿ ಬ್ರಿಯಾನಾಗೂ ಹೆರಿಗೆ ಸಮಯ ಹತ್ತಿರವಾಗಿತ್ತು.

ಆಸ್ಟಿನ್ ಅನುಪಸ್ಥಿತಿಯಲ್ಲೇ ಬ್ರಿಯಾನಾ ಗಂಡು ಮಗುವಿಗೆ ಜನ್ಮ ನೀಡಿದ್ಲು. ಬ್ರಿಯಾನಾಗೆ ಹೆರಿಗೆ ಆಗ್ತಿದ್ದಂತೆ ಚಮತ್ಕಾರ ಎಂಬಂತೆ ಆಸ್ಟಿನ್ ಗೂ ಪ್ರಜ್ಞೆ ಮರುಕಳಿಸಿದೆ. ಆದ್ರೆ ಆತ ಮೊದಲಿನಂತಿಲ್ಲ. ತಲೆಯಲ್ಲಿ ದೊಡ್ಡ ರಂಧ್ರವಾಗಿದೆ. ಗುರುತೇ ಸಿಗದಷ್ಟು ಬದಲಾಗಿದ್ದಾನೆ ಆಸ್ಟಿನ್.

ವ್ಹೀಲ್ ಚೇರ್ ಸಹಾಯವಿಲ್ಲದೆ ನಡೆಯವುದು ಕೂಡ ಕಷ್ಟ. ದಂಪತಿಗೆ ಮುದ್ದಾದ ಗಂಡು ಮಗುವಿದೆ. ಮಗನ ಜೊತೆ ಆಡಿ ನಲಿಯಬೇಕಾದ ತಂದೆ ಎನರ್ಜಿ ಡ್ರಿಂಕ್ಸ್ ಚಟಕ್ಕೆ ಬಿದ್ದು ಇಂಥಾ ದುಃಸ್ಥಿತಿ ತಂದುಕೊಂಡಿದ್ದಾನೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...