alex Certify
ಕನ್ನಡ ದುನಿಯಾ       Mobile App
       

Kannada Duniya

ತಪ್ಪಿ ಕಸದ ಬುಟ್ಟಿ ಸೇರ್ತು 12 ಲಕ್ಷ ನಗದು…!

ಚೀನಾದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ 12 ಲಕ್ಷ ರೂಪಾಯಿ ತುಂಬಿದ್ದ ಬ್ಯಾಗನ್ನು ಕಸಕ್ಕೆ ಎಸೆದಿದ್ದಾನೆ. ಬ್ಯಾಂಕ್ ಗೆ ಕಸದ ಬ್ಯಾಗ್ ಹಿಡಿದು ಬಂದಿದ್ದಾನೆ. ಬ್ಯಾಂಕ್ ಗೆ ಬರ್ತಿದ್ದಂತೆ ಆತನಿಗೆ ತನ್ನ ತಪ್ಪಿನ ಅರಿವಾಗಿದೆ. ಕಸದ ತೊಟ್ಟಿಗೆ ಹಾಕಿದ್ದು ಹಣದ ಬ್ಯಾಗ್ ಎಂಬುದು ಗೊತ್ತಾಗಿದೆ.

ಘಟನೆ ಚೀನಾದ ಲಾವನಿಂಗ್ ನಲ್ಲಿ ನಡೆದಿದೆ. ವ್ಯಕ್ತಿ ಅಡ್ಡ ಹೆಸರು ವಾಂಗ್ ಎಂದು ಮಾಧ್ಯಮಗಳು ವರದಿ ಮಾಡಿವೆ. ವಾಂಗ್ ಮನೆಯಿಂದ ಎರಡು ಬ್ಯಾಗ್ ಹಿಡಿದು ಬಂದಿದ್ದ. ಒಂದು ಬ್ಯಾಗ್ ನಲ್ಲಿ 12 ಲಕ್ಷ ರೂಪಾಯಿ ಹಣವಿತ್ತು. ಇನ್ನೊಂದರಲ್ಲಿ ಕಸವಿತ್ತು. ಕಸವೆಂದು ಹಣದ ಬ್ಯಾಗ್ ಎಸೆದು ಬಂದಿದ್ದಾನೆ ವಾಂಗ್.

ಬ್ಯಾಂಕ್ ಗೆ ಬಂದ ನಂತ್ರ ಆತಂಕಗೊಂಡ ವಾಂಗ್ ಮತ್ತೆ ಕಸವಿರುವ ಜಾಗಕ್ಕೆ ಹೋಗಿದ್ದಾನೆ. ಆದ್ರೆ ಅಲ್ಲಿ ಆತನ ಬ್ಯಾಗ್ ಇರಲಿಲ್ಲ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.ಪೊಲೀಸರು ಸಿಸಿ ಟಿವಿ ಚೆಕ್ ಮಾಡಿದ್ದಾರೆ. ಯಾರೋ ಬ್ಯಾಗ್ ತೆಗೆದುಕೊಂಡು ಹೋಗಿರುವುದು ಗೊತ್ತಾಗಿದೆ. ಆದ್ರೆ ಮುಖ ಸ್ಪಷ್ಟವಾಗಿ ಕಂಡಿರಲಿಲ್ಲ. ಅಕ್ಕಪಕ್ಕದವರ ವಿಚಾರಣೆ ಶುರುಮಾಡಿದ್ದಾರೆ ಪೊಲೀಸರು.

ಈ ಮಧ್ಯೆ ಮಹಿಳೆಯೊಬ್ಬಳು ಪೊಲೀಸ್ ಬಳಿ ಬಂದು ಹಣದ ಬ್ಯಾಗ್ ನೀಡಿದ್ದಾಳೆ. ಇಷ್ಟೊಂದು ಹಣ ನೋಡಿದ ನನಗೆ ಸರಿಯಾಗಿ ನಿದ್ರೆ ಬರಲಿಲ್ಲ ಎಂದಿದ್ದಾಳೆ. ಪ್ರಾಮಾಣಿಕ ಮಹಿಳೆಗೆ 20 ಸಾವಿರ ರೂಪಾಯಿ ನೀಡಿ ಗೌರವಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...