alex Certify
ಕನ್ನಡ ದುನಿಯಾ       Mobile App
       

Kannada Duniya

ದಿಕ್ಕು ತಪ್ಪಿ ಅಲಸ್ಕಾದಿಂದ ರಷ್ಯಾ ತಲುಪಿದ ಸಮುದ್ರಯಾನಿ

ರಷ್ಯಾ: ಅಮೆರಿಕಾದ ಅಲಸ್ಕಾದಿಂದ ರಷ್ಯಾದ ಈಶಾನ್ಯ ಚುಕೋಟ್ಕಾಗೆ ಅಮೆರಿಕ ಪ್ರಜೆಯೊಬ್ಬ ಅತಿಕ್ರಮ ಪ್ರವೇಶ ಮಾಡಿದ್ದಾನೆ. ಸಣ್ಣ ಬೋಟಿನಲ್ಲಿ ದಾರಿ ತಪ್ಪಿ ಅಲಸ್ಕಾದಿಂದ ಸಾಗರ ಮಾರ್ಗವಾಗಿ ಚುಕೋಟ್ಕಾ ತಲುಪಿರುವುದಾಗಿ ತಿಳಿದು ಬಂದಿದೆ.

ಅಮೆರಿಕಾದ ಜಾನ್‌ ಮಾರ್ಟಿನ್ ವಿಲಿಯಂ(46) ಎಂಬಾತ 2 ವಾರಗಳ ಹಿಂದೆ ತನ್ನ ವೈಯಕ್ತಿಕ ಸಣ್ಣ ಬೋಟ್‌ನಲ್ಲಿ ಸಾಗರದಲ್ಲಿ ಸಾಗಲು ನಿರ್ಧರಿಸಿದ್ದ. ಪ್ರತಿ ಬಾರಿ ಅಲಸ್ಕದ ನದಿಯಲ್ಲಿ ವಿಹಾರಕ್ಕಾಗಿ ತೆರಳುತ್ತಿದ್ದ. ಆದರೆ ಸಮುದ್ರದಲ್ಲಿ ತೆರಳುವ ವೇಳೆ ಪ್ರತಿಕೂಲ ಹವಾಮಾನಕ್ಕೆ ಸಿಕ್ಕಿ, ದಾರಿ ತಪ್ಪಿದ್ದಾನೆ. ದಿಕ್ಕು ಬದಲಾಗಿ ರಷ್ಯಾ ತಲುಪಿರುವುದಾಗಿ ಗೊತ್ತಾಗಿದೆ ಎಂದು ರಷ್ಯಾ ಸುದ್ದಿ ಮೂಲಗಳಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ಚುಕೋಟ್ಕೋದಿಂದ ವಿಲಿಯಂನನ್ನು ಲರ್ವೆಂಟಿಯಾಗೆ ಕರೆತರಲಾಗಿದ್ದು, ಅಧಿಕಾರಿಗಳು ವಾಪಾಸು ಕಳಿಸುವತ್ತ ಅಗತ್ಯ ಕ್ರಮ ಕೈಗೊಳ್ಳಲಿರುವರು ಎಂದು ತಿಳಿದು ಬಂದಿದೆ.

Related News

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...