alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯನ್ನು ನೋಡಲು ನಿತ್ಯ 6 ಮೈಲಿ ನಡೀತಾರೆ 99 ವರ್ಷದ ವೃದ್ದ…!

ಆಸ್ಪತ್ರೆಯಲ್ಲಿರುವ ಪತ್ನಿಯನ್ನು ಕಾಣಲು 99 ವರ್ಷದ ವೃದ್ದರೊಬ್ಬರು ದಿನನಿತ್ಯ 6 ಮೈಲಿಯಷ್ಟು ನಡೆಯುತ್ತಾರೆ ! ಹೌದು, ಆಶ್ಚರ್ಯ ಎಂದೆನಿಸಿದರೂ ಇದು ಸತ್ಯ ಸಂಗತಿ.

ನ್ಯೂಯಾರ್ಕ್‌ನಲ್ಲಿ ವಾಸವಿರುವ ಲೂಥರ್‌ ಎಂಬ 99 ವರ್ಷದ ಹಿರಿಯ, ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ. ಕೆಲ ಸಮಯದ ಹಿಂದೆ ಲೂಥರ್‌ ಪತ್ನಿಗೆ ಮಿದುಳು ಟ್ಯೂಮರ್‌ ಇರುವುದು ಪತ್ತೆಯಾಗಿದ್ದು, ಇನ್ನು ಕೆಲವೇ ವರ್ಷಗಳು ಬದುಕಿರುತ್ತಾರೆ ಎಂದು ವೈದ್ಯರು ತಿಳಿಸಿದ್ದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪತ್ನಿಯನ್ನು ಕಾಣಲು ಲೂಥರ್‌ ನಿತ್ಯ ನಡೆದೇ ಸಾಗುತ್ತಾರೆ. ಯಾರೇ ಲಿಫ್ಟ್‌ ನೀಡಲು ಮುಂದಾದರೂ ನಿರಾಕರಿಸುತ್ತಾರೆ. ಹಿರಿ ವಯಸ್ಸಿನಲ್ಲೂ ಉತ್ತಮ ದೇಹ ಸದೃಢತೆ ಹೊಂದಿರುವ ಲೂಥರ್‌, ಈ ಹಿಂದೆ ನೌಕಾಪಡೆಯಲ್ಲಿದ್ದರು. ಸೇನೆಯ ಶಿಸ್ತು, ದೇಹದ ಆರೋಗ್ಯವನ್ನು ಇಂದಿಗೂ ಅವರು ಕಾಪಾಡಿಕೊಂಡು ಬಂದಿದ್ದಾರೆ.

ಜನರು, ವಯಸ್ಸಿಗೆ ತಕ್ಕಂತೆ ವರ್ತಿಸಲು ಹೇಳುತ್ತಾರೆ. ಆದರೆ ಅವರಿಗೆ ನನ್ನ ಸದೃಢತೆ ನೋಡಿ ಹೊಟ್ಟೆ ಕಿಚ್ಚು. ನಾನು ಸಿಗರೇಟು, ಮದ್ಯಪಾನ ಮಾಡುವುದಿಲ್ಲ. ಮಾಡಿದ್ದರೆ ಈಗ ಇಲ್ಲಿರುತ್ತಿರಲಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಯಾವ ರೀತಿಯ ಮಹಿಳೆ ನನಗೆ ಅಗತ್ಯವೋ ಅಂತಹ ಮಹಿಳೆ ನನ್ನ ಪತ್ನಿ. ಅವಳು ತುಂಬಾ ಸುಂದರವಾಗಿದ್ದಾಳೆ. ಹೇಗಿರಬೇಕೋ, ಹೇಗೆ ವರ್ತಿಸಬೇಕೋ ಹಾಗೆಯೇ ಅವಳು ಇದ್ದಾಳೆ. ಅದಕ್ಕಾಗಿಯೇ ನಾನು ಅವಳನ್ನು ತುಂಬಾ ಇಷ್ಟಪಡುತ್ತೇನೆ ಎಂದು ಲೂಥರ್‌ ಹೇಳಿದ್ದಾರೆ.

ಇತ್ತೀಚೆಗೆ ಲೂಥರ್‌ ಪುತ್ರಿ, ಫಂಡ್‌ಮಿ ಖಾತೆ ತೆರೆದಿದ್ದು, ಆಸ್ಪತ್ರೆಯ ಖರ್ಚು ನೀಗಿಸಲು ಸಾಧ್ಯವಾಗುವಂತೆ ನೆರವು ಕೇಳಿದ್ದಾಳೆ. 2 ವಾರದಲ್ಲಿ 52 ಸಾವಿರ ಡಾಲರ್‌ ಸಂಗ್ರಹವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...