alex Certify
ಕನ್ನಡ ದುನಿಯಾ       Mobile App
       

Kannada Duniya

ಅಕಾರ್ಡಿಯನ್ ನುಡಿಸಿದ ದೀದಿ

ಪಶ್ಚಿಮ ಬಂಗಾಳಕ್ಕೆ ಹೂಡಿಕೆದಾರರನ್ನು ಸೆಳೆಯುವ ನಿಟ್ಟಿನಲ್ಲಿ ಜರ್ಮನಿ ಪ್ರವಾಸದಲ್ಲಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಜರ್ಮನಿಯ ರಸ್ತೆ ಪಕ್ಕದಲ್ಲಿ ಅಕಾರ್ಡಿಯನ್ ನುಡಿಸಿರುವುದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಫ್ರಾಂಕ್ ಫೋರ್ಟ್ ನ ಬೀದಿಯೊಂದರಲ್ಲಿ ದೀದಿ ಅವರು‌ ಮಿಕ್ಕಿ ಮೌಸ್ ವೇಷಧಾರಿಯೊಂದಿಗೆ ನುಡಿಸಿರುವ ವಿಡಿಯೋ ಭಾರಿ ಸದ್ದು ಮಾಡಿದೆ. ಜರ್ಮನಿಯ ಅನೇಕರು ಸೀರೆಯುಟ್ಟ ಮಹಿಳೆ ವಾದನ ನುಡಿಸುತ್ತಿರುವುದನ್ನು ಅಚ್ಚರಿಯಿಂದ ನೋಡಿದ್ದಾರೆ.

ಆದರೆ ಭಾರತದಲ್ಲಿ ಮಮತಾ ಅವರ ಈ‌ ನಡೆಗೆ ವಿಪಕ್ಷಗಳಿಂದ ವಿರೋಧ ವ್ಯಕ್ತವಾಗಿದೆ. ವಿದೇಶಿ ಹೂಡಿಕೆಯನ್ನು ಕರೆ ತರಲು‌ಹೋಗಿ ಈ ರೀತಿ ಮಾಡುತ್ತಿರುವುದು ಎಷ್ಟು ಸರಿ ಎಂದು ಸಿಪಿಐಎಂ ಪ್ರಶ್ನಿಸಿದೆ.

ಸಿಪಿಐಎಂನ ಸುಜನ್ ಚಕ್ರವರ್ತಿ, ಮಮತಾ ಅವರ ಈ‌ ವರ್ತನೆಯನ್ನು ಟ್ವೀಟರ್ ನಲ್ಲಿ ಖಂಡಿಸಿದ್ದು, ರಾಜ್ಯದ ಜನ ಪ್ರಾಣ ಸಂಕಟದಲ್ಲಿರುವಾಗ, ವಿದೇಶ ಪ್ರವಾಸದ ಅವಶ್ಯಕತೆ ಏನಿದೆ? ಬಾರ್ಕಿ ಮಾರ್ಕೆಟ್ ಬೆಂಕಿ ಬಿದ್ದಿರುವುದರಿಂದಾಗಿರುವ ಅನಾಹುತದ ಬಗ್ಗೆ ಯಾರ ಬಳಿ‌ ಕೇಳಬೇಕು? ಸದ್ಯಕ್ಕೆ ರಾಜ್ಯದಲ್ಲಿರುವ ಮುಖ್ಯಮಂತ್ರಿ ಯಾರು ಎಂಬ ಸಾಲು ಸಾಲು ಹ್ಯಾಷ್ ಟ್ಯಾಗ್ ಮೂಲಕ ಬ್ಯಾನರ್ಜಿಯವರನ್ನು ಟೀಕಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...