alex Certify
ಕನ್ನಡ ದುನಿಯಾ       Mobile App
       

Kannada Duniya

ಫೋಟೋಗ್ರಾಫರ್ ನನ್ನು ಅಟ್ಟಾಡಿಸಿದ ಮೊಸಳೆ

mosle-florida

ಫೋಟೋಗ್ರಾಪರ್ ಗಳಿಗೆ ಅತ್ಯುತ್ತಮವಾದ ಫೋಟೋ ತೆಗೆಯಬೇಕೆಂಬ ಹಂಬಲ ಇದ್ದೇ ಇರುತ್ತದೆ. ಇದಕ್ಕಾಗಿ ಗಂಟೆಗಟ್ಟಲೇ ಕಾಯುತ್ತಾರೆ. ಕೆಲವೊಮ್ಮೆ ಜೀವವನ್ನೇ ಪಣಕ್ಕಿಡುತ್ತಾರೆ. ಅಂತಹ ಘಟನೆಯೊಂದರ ಮಾಹಿತಿ ಇಲ್ಲಿದೆ.

ಫ್ಲೋರಿಡಾದ ಕೊಳವೊಂದರಲ್ಲಿ ಫೋಟೋ ತೆಗೆಯಲು ಬಂದಿದ್ದ ಛಾಯಾಗ್ರಾಹಕನನ್ನು ಮೊಸಳೆ ಬೆನ್ನಟ್ಟಿದ್ದು, ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಗೇನಸ್ ವಿಲ್ಲೆಯ ದಟ್ಟ ಕಾಡಿನ ಕೊಳದಲ್ಲಿ ಮೊಸಳೆಯ ಅಪರೂಪದ ದೃಶ್ಯಗಳನ್ನು ಸೆರೆಹಿಡಿಯಲು ಬೆನ್ ಬೌಕಾರಿ ಜೂನಿಯರ್ ತೆರಳಿದ್ದಾರೆ. ಈ ಸಂದರ್ಭದಲ್ಲಿ ಕೆಲ ಸ್ನೇಹಿತರೂ ಅವರೊಂದಿಗೆ ಇದ್ದರು.

ಕೊಳದ ಸಮೀಪ ಟ್ರೈಪಾಡ್ ಇಟ್ಟು ಬೆನ್ ಫೋಟೋ ತೆಗೆಯುವಾಗಲೇ ಮೊಸಳೆ ದಾಳಿ ಮಾಡಿದೆ. ಬೆನ್ ಹಿಂದಕ್ಕೆ ಹಾರಿ ಪೊದೆ ಮೇಲೆ ಬಿದ್ದಿದ್ದು, ಮೊಸಳೆ ಟ್ರೈಪಾಡ್ ನೂಕಿದೆ.

ಬಳಿಕ ಬೆನ್ ಕೈಯಲ್ಲಿದ್ದ ಮೊಬೈಲ್ ನಲ್ಲೇ ಮೊಸಳೆಯ ಫೋಟೋ ತೆಗೆದಿದ್ದು, ಆಗಲೂ ಮೊಸಳೆ ಅವರ ಮೇಲೆ ದಾಳಿ ಮಾಡಲು ಮುಂದಾಗಿದೆ. ಮೊಸಳೆಯ ದಾಳಿಗೂ ಬೆಚ್ಚದೇ ಬೆನ್ ಅಪರೂಪದ ಫೋಟೋ ತೆಗೆದುಕೊಂಡಿದ್ದಾರೆ. ಈ ದೃಶ್ಯಗಳನ್ನೆಲ್ಲಾ ಅವರ ಸ್ನೇಹಿತರು ಸೆರೆ ಹಿಡಿದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...