alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನ ಹೈಜಾಕ್ : 109 ಮಂದಿ ಬಿಡುಗಡೆ

lbia-109

ಮಾಲ್ಟಾ: ಲಿಬಿಯಾದ ವಿಮಾನವನ್ನು ಹೈಜಾಕ್ ಮಾಡಿರುವ, ಉಗ್ರರೊಂದಿಗೆ ನಡೆಸಿದ ಸಂಧಾನ ಫಲಪ್ರದವಾಗಿದ್ದು, ಮಹಿಳೆಯರು, ಮಕ್ಕಳು ಸೇರಿದಂತೆ 109 ಮಂದಿಯನ್ನು ಬಿಡುಗಡೆ ಮಾಡಲಾಗಿದೆ.

ಲಿಬಿಯಾದ ಸಬಾದಿಂದ ಟ್ರಿಪೋಲಿಗೆ ಹೊರಟಿದ್ದ ಆಫ್ರಿಖಿಯಾ ಏರ್ ಲೈನ್ಸ್ ಗೆ ಸೇರಿದ ಎ-320 ವಿಮಾನವನ್ನು ಪ್ರಯಾಣಿಕರ ಸೋಗಿನಲ್ಲಿದ್ದ ಇಬ್ಬರು ಉಗ್ರರು ಹೈಜಾಕ್ ಮಾಡಿದ್ದರು.

ಉಗ್ರರ ಬಳಿ ಗ್ರೆನೇಡ್ ಗಳು ಕೂಡ ಇದ್ದು, ವಿಮಾನವನ್ನು ಸ್ಪೋಟಿಸುವುದಾಗಿ ಬೆದರಿಕೆ ಹಾಕಿದ್ದರು. ಮಾಲ್ಟಾ ಏರ್ ಪೋರ್ಟ್ ನಲ್ಲಿ ವಿಮಾನ ಲ್ಯಾಂಡ್ ಆಗಿದ್ದು, ಅಗ್ನಿಶಾಮಕ ಸಿಬ್ಬಂದಿ ಮತ್ತು ಭದ್ರತಾ ಪಡೆಗಳು ಅದನ್ನು ಸುತ್ತುವರೆದವು.

ವಿಮಾದಲ್ಲಿದ್ದ ಉಗ್ರರೊಂದಿಗೆ ಸಂಧಾನ ನಡೆಸಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 109 ಮಂದಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಮಾಲ್ಟಾ ಪ್ರಧಾನಿ ಜೋಸೆಫ್ ಮಸ್ಕಟ್ ತಿಳಿಸಿದ್ದಾರೆ.

ವಿಮಾನದಲ್ಲಿ 111 ಪ್ರಯಾಣಿಕರು ಸೇರಿದಂತೆ 118 ಮಂದಿ ಇದ್ದು, ಅವರಲ್ಲಿ 109 ಮಂದಿಯನ್ನು ಬಿಡುಗಡೆ ಮಾಡಲಾಗಿದೆ.

ಅಪಹರಣಕಾರರೊಂದಿಗೆ ಸಂಧಾನ ಮಾತುಕತೆ ಮುಂದುವರೆಸಲಾಗಿದೆ. ಮಾಲ್ಟಾ ಏರ್ ಪೋರ್ಟ್ ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...