alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ಲಾಟ್ ಗೆ ನುಗ್ಗಿ ನಟಿ ಮಲ್ಲಿಕಾ ಶರಾವತ್ ಮೇಲೆ ಹಲ್ಲೆ

mallika

ಬಾಲಿವುಡ್ ನಟಿ ಮಲ್ಲಿಕಾ ಶರಾವತ್ ಅವರ ಮೇಲೆ ಅಪರಿಚಿತ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಶುಕ್ರವಾರ ರಾತ್ರಿ ಪ್ಯಾರಿಸ್ ನಲ್ಲಿರೋ ಅವರ ಅಪಾರ್ಟ್ ಮೆಂಟ್ ಗೆ ನುಗ್ಗಿದ ಮೂವರು ಮುಸುಕುಧಾರಿಗಳು ಮಲ್ಲಿಕಾ ಮೇಲೆ ಅಶ್ರುವಾಯು ಸಿಡಿಸಿದ್ದಾರೆ, ಬಳಿಕ ಥಳಿಸಿದ್ದಾರೆ. ಆ ಸಮಯದಲ್ಲಿ ಮಲ್ಲಿಕಾ ತಮ್ಮ ಗೆಳೆಯನ ಜೊತೆಗಿದ್ರು.

ಗೆಳೆಯನ ಜೊತೆ ಅಪಾರ್ಟ್ ಮೆಂಟ್ ಗೆ ಎಂಟ್ರಿಯಾಗ್ತಿದ್ದಂತೆ ಮೂವರು ಮುಸುಕುಧಾರಿಗಳು ಕೂಡ ನುಗ್ಗಿದ್ದಾರೆ. ಒಂದೇ ಒಂದು ಮಾತನಾಡಿಲ್ಲ, ಅಶ್ರುವಾಯು ಸಿಡಿಸಿ ಮಲ್ಲಿಕಾಗೆ ಪಂಚ್ ಕೊಟ್ಟಿದ್ದಾರೆ. ಬಳಿಕ ಅಲ್ಲಿಂದ ಮೂವರೂ ಪರಾರಿಯಾಗಿದ್ದಾರೆ.

ಮುಸುಕುಧಾರಿ ಕ್ರಿಮಿನಲ್ ಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಅವರು ಮಲ್ಲಿಕಾ ನಿವಾಸದಲ್ಲಿ ದರೋಡೆ ಮಾಡಲು ಬಂದಿದ್ದರು ಅಂತಾ ಹೇಳಲಾಗ್ತಿದೆ. ಕೆಲ ದಿನಗಳ ಹಿಂದಷ್ಟೆ ಮಲ್ಲಿಕಾ ಶೆರಾವತ್ ಅವರ ಪಕ್ಕದ ಮನೆಯಲ್ಲಿರೋ ನಟಿ ಕಿಮ್ ಕರ್ದಾಶಿಯನ್ ಅವರನ್ನು ಕಟ್ಟಿ ಹಾಕಿ ದರೋಡೆಕೋರರು ಲೂಟಿ ಮಾಡಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...