alex Certify
ಕನ್ನಡ ದುನಿಯಾ       Mobile App
       

Kannada Duniya

ಕೇಳದೆಯೇ ದುಡ್ಡು ಕೊಟ್ಟ ATM, ನೋಟು ಬಾಚಿಕೊಂಡ ಜೋಡಿ

ಬೀಜಿಂಗ್: ಕಳೆದ ವಾರ ರಷ್ಯಾದಲ್ಲಿ ಸರಕು ಸಾಗಣೆ ವಿಮಾನದಿಂದ ಚಿನ್ನ ಬಿದ್ದಿದ್ದು ಭಾರೀ ಸುದ್ದಿಯಾಗಿತ್ತು. ಈಗ ಚೀನಾದಲ್ಲಿ ಕೇಳದೆಯೇ ಹಣ ಸುರಿಸಿದ ಎ.ಟಿ.ಎಂ. ಭಾರಿ ಸದ್ದು ಮಾಡಿದೆ.

ಝೆಜಿಯಾಂಗ್ ಪ್ರಾಂತ್ಯದ ನಿಂಗ್ಬೊ ನಗರದಲ್ಲಿ ಬ್ಯಾಂಕ್ ಒಂದರ ಎ.ಟಿ.ಎಂ.ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಒಮ್ಮೆಲೆ ಸುಮಾರು 3,000 ಯುವಾನ್ ಮೊತ್ತದ ನೋಟುಗಳು ಎ.ಟಿ.ಎಂ. ಯಂತ್ರದಿಂದ ಹೊರಗೆ ಚಿಮ್ಮಿವೆ. ಈ ವೇಳೆ ಎ.ಟಿ.ಎಂ. ಒಳಗೆ ಯಾರೂ ಇರಲಿಲ್ಲ.

ನಂತರದಲ್ಲಿ ಅಲ್ಲಿಗೆ ಯುವ ಜೋಡಿಯೊಂದು ಬಂದಿದೆ. ಕೆಳಗೆ ಬಿದ್ದಿದ್ದ ನೋಟುಗಳನ್ನು ಬಾಚಿಕೊಂಡ ಯುವಕ ಅವುಗಳನ್ನು ಎಣಿಸಿಕೊಂಡು ಗೆಳತಿಯೊಂದಿಗೆ ಅಲ್ಲಿಂದ ತೆರಳಿದ್ದಾನೆ. ಈ ಎಲ್ಲಾ ದೃಶ್ಯಗಳು ಸಿ.ಸಿ. ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪೊಲೀಸರು ಎ.ಟಿ.ಎಂ.ನಲ್ಲಿ ಹಣ ಬಾಚಿಕೊಂಡಿದ್ದ ಯುವಜೋಡಿಯನ್ನು ಪತ್ತೆ ಹಚ್ಚಿ ಹಣ ವಾಪಸ್ ಮಾಡಲು ಮನವೊಲಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...