alex Certify
ಕನ್ನಡ ದುನಿಯಾ       Mobile App
       

Kannada Duniya

ಶವಾಗಾರದಲ್ಲಿ ಕಾಮತೃಷೆ ತೀರಿಸಿಕೊಂಡ ಕಾಮುಕ

ಪುರುಷ ನರ್ಸ್ ಒಬ್ಬ ಮಹಿಳೆಯ ಶವದ ಜೊತೆ ಕೆಟ್ಟದಾಗಿ ನಡೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಕೆಲ ಗಂಟೆಗಳ ಹಿಂದೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿದ್ದಳು. ಆಕೆ ಶವವನ್ನು ಶವಾಗಾರದಲ್ಲಿಡಲಾಗಿತ್ತು. ಈ ವೇಳೆ ಪುರುಷ ನರ್ಸ್ ಒಬ್ಬ ಶವದ ಜೊತೆ ಕಾಮ ತೃಷೆ ತೀರಿಸಿಕೊಳ್ಳಲು ಯತ್ನಿಸಿದ್ದಾನೆ.

ಬೊಲಿವಿಯಾದಲ್ಲಿ ಘಟನೆ ನಡೆದಿದೆ. 28 ವರ್ಷದ ಮಹಿಳೆ ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದಳು. ಆಕೆ ಪತಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿದ್ದಾಳೆ. ಆಕೆ ಶವವನ್ನು ಶವಾಗಾರದಲ್ಲಿಟ್ಟು ಆಸ್ಪತ್ರೆ ಕಚೇರಿ ಕೆಲಸಕ್ಕೆ ಕುಟುಂಬಸ್ಥರು ಹೋಗಿದ್ದಾರೆ. ಸಮಯ ನೋಡಿ ಶವಾಗಾರಕ್ಕೆ ಬಂದ ಪುರುಷ ನರ್ಸ್ ಶವದ ಜೊತೆ ಶಾರೀರಿಕ ಸಂಬಂಧ ಬೆಳೆಸಿದ್ದಾನೆ.

ಶವಾಗಾರಕ್ಕೆ ಬಂದ ಪತಿ ಇದನ್ನು ನೋಡಿ ಶಾಕ್ ಆಗಿದ್ದಾನೆ. ಹಿಂದಿನಿಂದ ಹೋಗಿ ಪುರುಷ ನರ್ಸ್ ಹಿಡಿದು ಥಳಿಸಿದ್ದಾನೆ. ನಂತ್ರ ಪೊಲೀಸರ ಕೈಗೆ ಕೊಟ್ಟಿದ್ದಾನೆ. ಕಳೆದ ವರ್ಷ ಅರ್ಜೆಂಟೀನಾದಲ್ಲಿಯೂ ಇಂತಹದ್ದೇ ಘಟನೆ ನಡೆದಿತ್ತು. ಸತ್ತ ಮಹಿಳೆ ಶವದ ಜೊತೆ ಅಪರಿಚಿತನೊಬ್ಬ ಲೈಂಗಿಕ ಸಂಬಂಧ ಬೆಳೆಸಿ ಸಿಕ್ಕಿಬಿದ್ದಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...