alex Certify
ಕನ್ನಡ ದುನಿಯಾ       Mobile App
       

Kannada Duniya

ಆಸ್ಟ್ರೇಲಿಯಾದ ಸಚಿವರು-ಕಚೇರಿ ಸಿಬ್ಬಂದಿ ಮಧ್ಯೆ ನೋ ಸೆಕ್ಸ್…!

ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಮ್ ಟರ್ನ್ಬುಲ್ ತಮ್ಮ ಸಂಪುಟದ ಸಚಿವರುಗಳು ಹಾಗೂ ಇತರ ಸಿಬ್ಬಂದಿ ನಡುವಣ ಲೈಂಗಿಕ ಸಂಬಂಧಕ್ಕೆ ನಿಷೇಧ ಹೇರಿದ್ದಾರೆ. ಇದಕ್ಕೆ ಕಾರಣ ಆಸ್ಟ್ರೇಲಿಯಾ ಉಪ ಪ್ರಧಾನಿಯ ಲವ್ ಅಫೇರ್.

ಉಪ ಪ್ರಧಾನಿ ಬರ್ನಬಿ ಜಾಯ್ಸ್ ಗೆ 24 ವರ್ಷಗಳ ಹಿಂದೆಯೇ ಮದುವೆಯಾಗಿದೆ. ಆದ್ರೆ ಕಚೇರಿಯಲ್ಲಿ ಕೆಲಸ ಮಾಡ್ತಾ ಇದ್ದ ಸಿಬ್ಬಂದಿ ಜೊತೆಗೆ ಆತ ದೈಹಿಕ ಸಂಬಂಧ ಇಟ್ಟುಕೊಂಡಿದ್ರು. ಈಗ ಆ ಮಹಿಳೆ ತಾಯಿಯಾಗ್ತಿದ್ದಾಳಂತೆ.

ಈ ಅಫೇರ್ ಆಸ್ಟ್ರೇಲಿಯಾ ಸರ್ಕಾರದ ಬುಡವನ್ನೇ ಅಲ್ಲಾಡಿಸಿತ್ತು. ಪ್ರಧಾನಿ ಮಾಲ್ಕಮ್ ಕೂಡ ಪ್ರತಿಪಕ್ಷಗಳ ಬಾಯಿಗೆ ಆಹಾರವಾಗಿದ್ದರು. ಮಾಲ್ಕಮ್ ರ ಲಿಬರಲ್ ಪಾರ್ಟಿ ಹಾಗೂ ಜಾಯ್ಸ್ ಅವರ ನ್ಯಾಶನಲ್ ಪಾರ್ಟಿ ಜಂಟಿಯಾಗಿ ಸರ್ಕಾರ ರಚಿಸಿವೆ.

ಹಾಗಾಗಿ ಜಾಯ್ಸ್ ರನ್ನು ಉಚ್ಛಾಟನೆ ಮಾಡಿದ್ರೆ ಸರ್ಕಾರ ಪತನವಾಗೋದು ಖಚಿತ. ಅದಕ್ಕಾಗಿಯೇ ಸಚಿವರು ಮತ್ತು ಸಿಬ್ಬಂದಿ ಮಧ್ಯೆ ಸೆಕ್ಸ್ ಅನ್ನೇ ಪ್ರಧಾನಿ ಬ್ಯಾನ್ ಮಾಡಿಬಿಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...