alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳೊಂದಿಗೇ ಅಸಹಜ ಲೈಂಗಿಕ ಕ್ರಿಯೆ

malesiya

ಕ್ವಾಲಲಾಂಪುರ್: ಮಲೇಷ್ಯಾದಲ್ಲಿ ಕಾಮುಕನೊಬ್ಬ ತನ್ನ ಮಗಳ ಮೇಲೆಯೇ 600 ಕ್ಕೂ ಅಧಿಕ ಸಲ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಪತ್ನಿಗೆ ಡೈವೋರ್ಸ್ ಕೊಟ್ಟಿದ್ದ 36 ವರ್ಷದ ಕಾಮುಕ, ಪುತ್ರಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದು, ಆತನ ವಿರುದ್ಧ 600 ಕೇಸ್ ದಾಖಲಾಗಿದೆ.

ಪೊಲೀಸರು ಸಲ್ಲಿಸಿದ್ದ 626 ಪುಟಗಳ ಆರೋಪ ಪಟ್ಟಿಯನ್ನು ಓದಲು ನ್ಯಾಯಾಲಯದ ಅಧಿಕಾರಿಗಳು ಬರೋಬ್ಬರಿ 2 ದಿನ ತೆಗೆದುಕೊಂಡಿದ್ದಾರೆ. ಈ ಪ್ರಕರಣಗಳಲ್ಲಿ ಆರೋಪ ಸಾಬೀತಾದಲ್ಲಿ ಕಾಮುಕನಿಗೆ 12,000 ವರ್ಷ ಜೈಲು ಶಿಕ್ಷೆಯಾಗಲಿದೆ.

ಹತ್ತಿರದ ರಕ್ತ ಸಂಬಂಧಿಯೊಂದಿಗೆ ಲೈಂಗಿಕ ಸಂಪರ್ಕ, ಅತ್ಯಾಚಾರ, 599 ಸಲ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದಾಗಿ ಕಾಮುಕನ ವಿರುದ್ಧ ಪ್ರಕರಣ ದಾಖಲಾಗಿದೆ.

ಸಂತ್ರಸ್ಥೆಯ ಗುರುತನ್ನು ಬಹಿರಂಗಪಡಿಸದಿರುವ ಕಾರಣಕ್ಕೆ ಆರೋಪಿಯ ಹೆಸರನ್ನು ಕೂಡ ಬಹಿರಂಗಪಡಿಸಿಲ್ಲ. ಬಾಲಕಿಯ ತಾಯಿ ನೀಡಿದ್ದ ದೂರಿನ ಅನ್ವಯ ಕಾಮುಕನನ್ನು ಪೊಲೀಸರು ಬಂಧಿಸಿದಾಗ, ಅತ್ಯಾಚಾರದ ಸಂಗತಿ ಬಯಲಾಗಿತ್ತು.

ನ್ಯಾಯಾಲಯ ಆರೋಪಿಗೆ ಜಾಮೀನು ನೀಡಲು ನಿರಾಕರಿಸಿದೆ. ಈತ ಎಸಗಿರುವ ಅಪರಾಧಕ್ಕೆ 12,000 ವರ್ಷ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...