alex Certify
ಕನ್ನಡ ದುನಿಯಾ       Mobile App
       

Kannada Duniya

ಮಧ್ಯಾಹ್ನ 12 ರಿಂದ ಸಂಜೆ 4 ಗಂಟೆವರೆಗೆ ಇಲ್ಲಿ ಇಂಟರ್ನೆಟ್ ಬಂದ್?

ಕೌಲಾಲಂಪುರ: ಯುವಪೀಳಿಗೆಯ ಆರೋಗ್ಯದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮ ಹಾಗೂ ಸಾಮಾಜಿಕ ಜಾಲ ತಾಣ ಬಳಕೆ ಚಟ ತಡೆಯುವ ನಿಟ್ಟಿನಲ್ಲಿ ಮಲೇಷ್ಯಾ ಸರ್ಕಾರ ಮಧ್ಯಾಹ್ನ 12 ಗಂಟೆಯಿಂದ ಸಂಜೆ 6 ಗಂಟೆವರೆಗೆ ಇಂಟರ್‌ನೆಟ್‌ ಬಳಕೆ ನಿಷೇಧಿಸಲು ಮಂದಾಗಿದೆ.

ಹದಿಹರೆಯದವರ ಮಾನಸಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು, ಅವರ ಆನ್‌ಲೈನ್‌ ವಿಡಿಯೋ ಗೇಮ್‌ ಮತ್ತು ಸಾಮಾಜಿಕ ಜಾಲತಾಣ ಆಪ್‌ಗಳ ಬಳಕೆಯ ಚಟ ದೂರಮಾಡಲು, ಜಪಾನ್‌ ಮತ್ತು ದಕ್ಷಿಣ ಕೊರಿಯಾದಲ್ಲಿ ತೆಗೆದುಕೊಂಡಿರುವ ಕ್ರಮಗಳ ಮಾದರಿಯನ್ನು ಮಲೇಷ್ಯಾ ಅನುಷ್ಠಾನಗೊಳಿಸಲು ಚಿಂತನೆ ನಡೆಸಿದೆ ಎಂದು ಉಪ ಆರೋಗ್ಯ ಸಚಿವ ಡಾ.ಲೀ ಬೂನ್‌ ಚೈ ಮಲೇಷ್ಯಾ ಸಂಸತ್‌ಗೆ ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಮಲೇಷ್ಯನ್‌ ಕಮ್ಯುನಿಕೇಷನ್ಸ್‌ ಮತ್ತು ಮಲ್ಟಿಮೀಡಿಯಾ ಕಮೀಷನ್‌(ಎಂಸಿಎಂಸಿ) ನೀಡಿದ ಮಾಹಿತಿ ಪ್ರಕಾರ, 13 ರಿಂದ 17 ವರ್ಷದ ಮಲೇಷ್ಯನ್‌ ಮಕ್ಕಳಲ್ಲಿ ಶೇ.34.9 ರಷ್ಟು ಮಕ್ಕಳಿಗೆ ಇಂಟರ್ನೆಟ್‌ ಚಟ ಇರುವುದು ತಿಳಿದುಬಂದಿದೆ. ವಿಡಿಯೋ ಗೇಮ್‌ ಮತ್ತು ಸಾಮಾಜಿಕ ಜಾಲತಾಣ ಆಪ್‌ಗಳ ಅತಿಯಾದ ಬಳಕೆಯು ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ವಿಶ್ವ ಆರೋಗ್ಯ ಸಂಸ್ಥೆಯು ವಿಡಿಯೋ ಗೇಮ್‌ ಚಟವನ್ನು ಮಾನಸಿಕ ಆರೋಗ್ಯ ಕಾಯಿಲೆ ಎಂದು ವಿಭಾಗೀಕರಿಸಿದೆ ಎಂದು ಲೀ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ 17 ವರ್ಷದೊಳಗಿನ ಯುವಪೀಳಿಗೆ ಇಂಟರ್ ನೆಟ್ ಬಳಸಲು ನಿಷೇಧ ಹೇರುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...