alex Certify
ಕನ್ನಡ ದುನಿಯಾ       Mobile App
       

Kannada Duniya

ಹೆರಿಗೆ ಕೋಣೆಯಲ್ಲಿನ ಆಕೆಯ ಫೋಟೋ ವೈರಲ್ ಆಯ್ತು

make up

ಹೆಣ್ಣುಮಕ್ಕಳು ಗರ್ಭಿಣಿಯರಾಗಿದ್ದ ಸಂದರ್ಭದಲ್ಲಿ ಅವರಿಗೆ ಏನಾದರೂ ಇಷ್ಟವಾದರೆ, ಅದನ್ನು ನೆರವೇರಿಸಬೇಕೆಂದು ಸಾಮಾನ್ಯವಾಗಿ ಹೇಳುತ್ತಾರೆ. ಅದನ್ನೇ ಬಸುರಿ ಬಯಕೆ ಎಂದೂ ಕರೆಯುತ್ತಾರೆ. ಗರ್ಭಿಣಿಯರಿಗೆ ಒತ್ತಡ ಜಾಸ್ತಿ ಇರುತ್ತದೆ.

ಈ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಕೆಲವರು ದೇವರ ನಾಮ ಸ್ಮರಣೆ ಮಾಡಿದರೆ, ಮತ್ತೆ ಕೆಲವರು ಪುಸ್ತಕ ಓದುತ್ತಾರೆ. ಇನ್ನು ಕೆಲವರು ತಮಗೆ ಇಷ್ಟವಾದ ಕೆಲಸ ಮಾಡುತ್ತಾರೆ. ಅದರಲ್ಲಿಯೂ ಹೆರಿಗೆಗೆ ದಾಖಲಾದ ಸಂದರ್ಭದಲ್ಲಿ ಗರ್ಭಿಣಿಯರಿಗೆ ಒತ್ತಡ ಸಿಕ್ಕಾಪಟ್ಟೆ ಜಾಸ್ತಿಯಾಗಿರುತ್ತದೆ. ಇದರಿಂದ ಹೊರಬರಲು ಕೆಲವರು ಏನೇನೋ ಮಾಡುತ್ತಾರೆ. ಆದರೆ, ನ್ಯೂಯಾರ್ಕ್ ಮೇಕಪ್ ಕಲಾವಿದೆಯಾಗಿರುವ ಅಲಾಹಾ ಕರೀಮಿ ಎಂಬ ಗರ್ಭಿಣಿ ಹೆರಿಗೆ ಕೋಣೆಯಲ್ಲಿ ಮೇಕಪ್ ಮಾಡಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.

ಗರ್ಭಿಣಿಯಾಗಿರುವ ಅಲಾಹಾ ಕರೀಮಿ ಹೆರಿಗೆಗೆಂದು ಆಸ್ಪತ್ರೆಗೆ ಹೋಗಿದ್ದು, ಅಲ್ಲಿ ದಾಖಲಾಗಿದ್ದ ಸಂದರ್ಭದಲ್ಲಿ, ಒತ್ತಡ ಕಡಿಮೆ ಮಾಡಿಕೊಳ್ಳಲು ಪುಸ್ತಕ ಓದಿದ್ದಾರೆ. ಆದರೂ ಒತ್ತಡ ಕಡಿಮೆಯಾಗದ ಕಾರಣ, ತಮಗೆ ಇಷ್ಟವಾದ ಮೇಕಪ್ ಕಿಟ್ ತೆಗೆದುಕೊಂಡು ಅಲ್ಲೇ ಮೇಕಪ್ ಮಾಡಿಕೊಂಡಿದ್ದಾರೆ.

ಹೀಗೆ, ತಾವು ಹೆರಿಗೆ ಕೋಣೆಯಲ್ಲಿ ಮೇಕಪ್ ಮಾಡಿಕೊಂಡ ಫೋಟೋವನ್ನು ಅಲಾಹಾ ಕರೀಮಿ, ಸಾಮಾಜಿಕ ಜಾಲತಾಣದಲ್ಲಿಯೂ ಪೋಸ್ಟ್ ಮಾಡಿದ್ದು, ಅದರಿಂದ ಒತ್ತಡ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. ಅದನ್ನು ಅಸಂಖ್ಯಾತ ಜನ ವೀಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...