alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಚೆ ಪೆಟ್ಟಿಗೆಯ ಮೇಲೆ ಬೆಚ್ಚಗೆ ಕುಳಿತಿತ್ತು ಹೆಬ್ಬಾವು…!

ಅಮೆರಿಕಾದಲ್ಲಿ ಪೋಸ್ಟ್ ಮ್ಯಾನ್ ಗೆ ಅಚ್ಚರಿ ಕಾದಿತ್ತು. ಮನೆ ಮನೆಗೆ ಹೋಗಿ ಪತ್ರಗಳನ್ನು ರವಾನೆ ಮಾಡುವಾಗ ಆತ ಆಘಾತಕಾರಿ ದೃಶ್ಯ ನೋಡಿದ್ದಾನೆ. ಅಂಚೆ ಪೆಟ್ಟಿಗೆಯ ಮೇಲೆ ಸುಮಾರು 8 ಅಡಿ ಉದ್ದದ ಹೆಬ್ಬಾವು ಕಂಡು ಭಯ ಭೀತನಾಗಿದ್ದಾನೆ.

ಈ ದೃಶ್ಯ ಕಂಡ್ರೆ ಯಾರಿಗೆ ಭಯ ಆಗುವುದಿಲ್ಲ ಹೇಳಿ. ಎಲ್ಲರಿಗೂ ಈ ದೃಶ್ಯ ಮೈ ಜುಮ್ ಎನಿಸುತ್ತದೆ. ಪೋಸ್ಟ್ ಮ್ಯಾನ್ ಈ ಬಗ್ಗೆ ಪೊಲೀಸರಿಗೆ ಕಾಲ್ ಮಾಡಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಹೆಬ್ಬಾವನ್ನು ವಶಕ್ಕೆ ಪಡೆಯಲು ಹರಸಾಹಸ ಪಟ್ಟಿದ್ದಾರೆ. ಗೇಟ್ ಹತ್ತಿರದ ಅಂಚೆ ಪೆಟ್ಟಿಗೆಯ ಮೇಲೆ ಅವಿತು ಕುಳಿತುಕೊಂಡಿದ್ದ ಹೆಬ್ಬಾವು, ಸುಲಭವಾಗಿ ಪೊಲೀಸರು ಹಾಕಿದ ಬಲೆಗೆ ಬೀಳಲಿಲ್ಲ.

ಕಡೆಗೂ ಅದನ್ನು ಹಿಡಿಯುವಲ್ಲಿ ಯಶಸ್ವಿಯಾದ ಓವರ್ಲ್ಯಾಂಡ್ ಪಾರ್ಕ್ ಪೊಲೀಸರು ಈ ಚಿತ್ರವನ್ನು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಹೆಬ್ಬಾವು ಅಂಚೆ ಪೆಟ್ಟಿಗೆ ಮೇಲೆ ಕುಳಿತುಕೊಂಡಿದ್ದರಿಂದ ಈ ಮನೆಗೆ ಪತ್ರಗಳು ಬಂದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಬರೆದಿದ್ದಾರೆ. ಈ ಫೋಟೋ ವೈರಲ್ ಆಗ್ತಾ ಇದ್ದಂತೆ ಹಲವರು ಈ ಕುರಿತು ರಿಪ್ಲೈ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...