alex Certify
ಕನ್ನಡ ದುನಿಯಾ       Mobile App
       

Kannada Duniya

4 ಲಕ್ಷ 59 ಸಾವಿರ ರೂ.ಗೆ ಹರಾಜಾಗಿದೆ ಗಾಂಧಿ ಬರೆದ ಪತ್ರ

ಬೋಸ್ಟನ್ ನಲ್ಲಿ ಮಹಾತ್ಮಾಗಾಂಧಿ ಬರೆದ ಪತ್ರವೊಂದು 6358 ಡಾಲರ್ (ಅಂದ್ರೆ 4,59,301 ರೂಪಾಯಿ)ಗೆ ಮಾರಾಟವಾಗಿದೆ. ಈ ಪತ್ರದಲ್ಲಿ ದಿನಾಂಕವಿಲ್ಲ. ಗಾಂಧೀಜಿ ಚರಕದ ಮಹತ್ವವನ್ನು ಪತ್ರದಲ್ಲಿ ವಿವರಿಸಿದ್ದಾರೆ. ಅಮೆರಿಕಾದ ಆರ್ ಆರ್ ಆಕ್ಷನ್  ಈ ಬಗ್ಗೆ ಮಾಹಿತಿ ನೀಡಿದೆ.

ಪತ್ರವನ್ನು ಗಾಂಧಿ ಗುಜರಾತಿ ಭಾಷೆಯಲ್ಲಿ ಬರೆದಿದ್ದಾರೆ. ಪತ್ರವನ್ನು ಯಶವಂತ್ ಪ್ರಸಾದ್ ಎಂಬುವವರಿಗೆ ಬರೆದಿದ್ದಾರೆ. ನಾವು ಏನು ನಿರೀಕ್ಷೆ ಮಾಡಿದ್ದೆವೋ ಅದೇ ಆಗಿದೆ ಎಂದು ಪತ್ರದಲ್ಲಿ ಗಾಂಧಿ ಬರೆದಿದ್ದಾರಂತೆ. ಚರಕವೆಂದ್ರೆ ಗಾಂಧಿ. ಸ್ವಾತಂತ್ರ್ಯ ಚಳುವಳಿಯಲ್ಲಿ ಗಾಂಧಿ ಆಂದೋಲಕ್ಕೆ ಚರಕ, ಖಾದಿಯನ್ನು ಬಳಸಿಕೊಂಡಿದ್ದರು.

ಇನ್ನು ಗಾಂಧಿ ಜಯಂತಿ ಹತ್ತಿರ ಬರ್ತಿದೆ. 150ನೇ ಗಾಂಧಿ ಜಯಂತಿ ಆಚರಣೆಗೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಸಿದ್ಧತೆ ನಡೆಸುತ್ತಿದೆ. ಈ ವೇಳೆ ಗಾಂಧಿ ಪತ್ರ 4,59,301 ರೂಪಾಯಿಗೆ ಮಾರಾಟವಾಗಿರುವುದು ಶುಭಸುದ್ದಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...