alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರೇಕಿಂಗ್! ಭಾರೀ ಭೂಕಂಪನ: ಸುನಾಮಿ ಎಚ್ಚರಿಕೆ

ಕೆರೆಬಿಯನ್ ನಾಡಲ್ಲಿ ಭಾರೀ ಭೂಕಂಪನವಾಗಿದ್ದು, ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ. ಹೊಂಡುರಾಸ್ ನ ಉತ್ತರ ಕರಾವಳಿಯಲ್ಲಿ ಸ್ಥಳೀಯ ಕಾಲಮಾನ ಮಂಗಳವಾರ ಸಂಜೆ 7.6 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದೆ ಎಂದು ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ಅಧಿಕಾರಿಗಳು ತಿಳಿಸಿದ್ದಾರೆ.

ಭೂಕಂಪನದ ಕೇಂದ್ರ ಬಿಂದು ಹೊಂಡುರಾಸ್ ಉತ್ತರ ಕರಾವಳಿ ಭಾಗದಲ್ಲಿ ಕಂಡು ಬಂದಿದೆ. ಮೊದಲಿಗೆ 7.8 ತೀವ್ರತೆಯ ಕಂಪನ ಎಂದು ಅಂದಾಜಿಸಲಾಗಿತ್ತಾದರೂ, ನಂತರದಲ್ಲಿ ಅದನ್ನು ಪರಿಷ್ಕರಿಸಲಾಗಿದೆ.

ಭೂಕಂಪನದಿಂದಾಗಿ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಪೋರ್ಟೋರಿಕೊ, ವರ್ಜಿನ್ ದ್ವೀಪಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಕೇಮನ್ ದ್ವೀಪಗಳು, ಕ್ಯೂಬಾ, ನಿಕರಗುವಾ, ಪನಾಮಾ, ಗ್ವಾಟೆಮಾಲಾ, ಮೆಕ್ಸಿಕೊ, ಹೊಂಡುರಾಸ್, ಬೆಲೀಜ್, ಜಮೈಕಾ ಮತ್ತು ಕೋಸ್ಟರಿಕಾ ಪ್ರದೇಶಗಳಿಗೆ ಅಪಾಯದ ಮುನ್ಸೂಚನೆ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...