alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಂಗಾಪುರದಲ್ಲಿ ರೂಪೇ ಕಾರ್ಡ್ ಮೂಲಕ ಅದ್ಭುತ ಪೇಟಿಂಗ್ ಖರೀದಿ ಮಾಡಿದ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೂರು ದೇಶಗಳ ಪ್ರವಾಸ ಮುಗಿಸಿ ಇಂದು ಭಾರತಕ್ಕೆ ವಾಪಸ್ ಆಗಲಿದ್ದಾರೆ. ಪ್ರವಾಸದ ಕೊನೆಯ ದಿನ ಸಿಂಗಾಪುರದಲ್ಲಿ ಕಳೆದ ಮೋದಿ ಇಂಡಿಯನ್ ಹೆರಿಟೇಜ್ ಸೆಂಟರ್ ಗೆ ಭೇಟಿ ನೀಡಿದ್ದರು. ಈ ವೇಳೆ ಮಧುಬನಿ ಚಿತ್ರಕಲೆಯನ್ನು ಮೋದಿ ಖರೀದಿ ಮಾಡಿದ್ದಾರೆ. ವಿಶೇಷವೆಂದ್ರೆ ಪೇಟಿಂಗ್ ಖರೀದಿಗೆ ಮೋದಿ ರೂಪೇ ಕಾರ್ಡ್ ಬಳಸಿದ್ದಾರೆ.

ಡಿಜಿಟಲ್ ಇಂಡಿಯಾ ಪ್ರಚಾರವನ್ನು ವಿಸ್ತರಿಸುವ ಉದ್ದೇಶದಿಂದ ಮೋದಿ ರೂಪೇ ಕಾರ್ಡ್ ನಲ್ಲಿ ಪೇಟಿಂಗ್ ಖರೀದಿ ಮಾಡಿದ್ದಾರೆ. ಈ ಬಗ್ಗೆ ಮೋದಿ ಟ್ವೀಟರ್ ಕೂಡ ಮಾಡಿದ್ದಾರೆ. ಸಿಂಗಾಪುರ-ಭಾರತವನ್ನು ಹತ್ತಿರಕ್ಕೆ ತರಲು ಇಂಡಿಯನ್ ಹೆರಿಟೇಜ್ ಸೆಂಟರ್ ಮಾಡುತ್ತಿರುವ ಕೆಲಸ ಶ್ಲಾಘನೀಯ. ರೂಪೇ ಕಾರ್ಡ್ ಬಳಸಿ ನಾನು ಮಧುಬನಿ ಪೇಟಿಂಗ್ ಖರೀದಿ ಮಾಡಿದ್ದೇನೆಂದು ಮೋದಿ ಟ್ವಿಟ್ ಮಾಡಿದ್ದಾರೆ.

ಮಧುಬನಿ ಪೇಟಿಂಗ್ ಭಾರತ-ನೇಪಾಳದ ಮಿಥಿಲಾ ಕ್ಷೇತ್ರದ ಪ್ರಸಿದ್ಧ ಕಲೆಯಾಗಿದೆ. ಸಿಂಗಾಪುರದಲ್ಲಿರುವ ಇಂಡಿಯನ್ ಹೆರಿಟೇಜ್ ಸೆಂಟರ್ ಸಿಂಗಾಪುರ ಹಾಗೂ ಭಾರತೀಯರ ಸಂಸ್ಕೃತಿ, ಬೆಳವಣಿಗೆ, ಇತಿಹಾಸವನ್ನು ಒಂದೇ ಕಡೆ ತೋರಿಸುವ ಪ್ರಯತ್ನ ಮಾಡ್ತಿದೆ. ಮೇ.7 ರಂದು ಹೆರಿಟೇಜ್ ಸೆಂಟರ್ ಉದ್ಘಾಟನೆಗೊಂಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...