alex Certify
ಕನ್ನಡ ದುನಿಯಾ       Mobile App
       

Kannada Duniya

ಹರಾಜಾಗಲಿವೆ ಪಾಕ್ ಪ್ರಧಾನಿಯ ಐಶಾರಾಮಿ ಕಾರುಗಳು…!

ಪಾಕಿಸ್ತಾನದಲ್ಲಿ ನೂತನವಾಗಿ ಅಧಿಕಾರಕ್ಕೇರಿರುವ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ತನ್ನ ಶಿಸ್ತು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದೆ. 2018ರ ಸೆಪ್ಟೆಂಬರ್ 17ರಂದು ಪಾಕಿಸ್ತಾನದ ಪ್ರಧಾನಿ ನಿವಾಸದಲ್ಲಿ ಅನೇಕ ಕಾರುಗಳ ಹರಾಜು ಪ್ರಕ್ರಿಯೆ ನಡೆಯಲಿದೆ. ಪಾಕಿಸ್ತಾನದ ಪ್ರಧಾನಿ ಕಾರ್ಯಾಲದ ಅನೇಕ ಕಾರುಗಳು ಇಲ್ಲಿ ಹರಾಜಾಗಲಿವೆ.

8 ಬಿಎಂಡಬ್ಲ್ಯು, 5000 ಸಿಸಿ ಎಕ್ಸ್ಯುವಿ ಕಾರುಗಳು ಮೂರು, 3000 ಸಿಸಿಯ ಎರಡು ಕಾರುಗಳು ಬಿಕರಿಯಾಗಲಿವೆ. ಇಷ್ಟೇ ಅಲ್ಲ. 4000 ಸಿಸಿ ಸಾಮರ್ಥ್ಯದ ನಾಲ್ಕು ಮರ್ಸಿಡಿಸ್ ಬೆಂಝ್ ಅದರಲ್ಲಿ ಎರಡು ಕಾರುಗಳು ಬುಲೆಟ್ ಪ್ರೂಫ್ ಮತ್ತು 16 ಟೊಯೊಟೋ ಕಾರುಗಳು ಸೇರಿವೆ. ಇದರ ಹೊರತಾಗಿಯೂ 2 ಲ್ಯಾಂಡ್ ಕ್ರೂಸರ್, 2003 ರಿಂದ 2013 ರ ಅವಧಿಯಲ್ಲಿ ಖರೀದಿಸಿದ ಎಂಟು ಕಾರುಗಳು, 2015ರಲ್ಲಿ ಖರೀದಿಸಿದ ಲ್ಯಾಂಡ್ ಕ್ರೂಸರ್, ಒಂದು ಹೊಂಡಾ ಸಿವಿಕ್, ಮೂರು ಸುಜುಕಿ ಸಂಸ್ಥೆಯ ಕಾರುಗಳು ಮತ್ತೊಂದು ಹಿನೋ ಬಸ್ ಕೂಡ ಸೇರಿದೆ.

ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರದಲ್ಲಿ ಇಮ್ರಾನ್ ಖಾನ್ ತಮ್ಮ ವಾಸಸ್ಥಾನ ಬದಲಿಸಿದ್ದಾರೆ. ಸರ್ಕಾರದಿಂದ ಕೊಟ್ಟಿರುವಂತಾ ಪ್ರಧಾನಿ ಕಾರ್ಯಾಲಯದಲ್ಲಿ ತಂಗುವುದಿಲ್ಲ ಅಂತ ಅವರು ತಿಳಿಸಿದ್ದು, ಸರ್ಕಾರದ ಆಯವ್ಯಯಗಳ ಮೇಲೆ ಅವರು ನಿಗಾ ವಹಿಸಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...