alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರೀ ಸಿಡಿಲಿನಿಂದ ಬಚಾವ್ ಆಗಿದ್ದಾನೆ ಈತ

ಗುಡುಗು, ಸಿಡಿಲು, ಬಿರುಗಾಳಿಯ ಅಬ್ಬರವನ್ನು ಕ್ಯಾಮರಾದಲ್ಲಿ ಸೆರೆಹಿಡಿಯುತ್ತಿದ್ದ ವ್ಯಕ್ತಿಯೊಬ್ಬ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ನಾರ್ವೆ ನಿವಾಸಿ 38 ವರ್ಷದ ಡೇನಿಯಲ್ ಮೊಡೊಲ್ ಹಿಂದೆಂದೂ ಇಂತಹ ದೃಶ್ಯವನ್ನು ಕಂಡಿರಲಿಲ್ಲ.

ಗುಡುಗು, ಸಿಡಿಲಿನ ಆರ್ಭಟ ಜೋರಾಗಿತ್ತು. ಕುತೂಹಲದಿಂದ ಒಳಾಂಗಣದಲ್ಲಿ ನಿಂತಿದ್ದ ಡೇನಿಯಲ್, ಅದನ್ನು ಚಿತ್ರೀಕರಿಸುತ್ತಿದ್ದ. ಒಂದೆರಡು ಬಾರಿ ಜೋರಾಗಿ ಸಿಡಿಲು ಬಡಿದಿತ್ತು. ಆದ್ರೂ ಡೇನಿಯಲ್ ಅಲ್ಲೇ ನಿಂತಿದ್ದ. ಕೆಲವೇ ಕ್ಷಣಗಳಲ್ಲಿ ಭಾರೀ ಸಿಡಿಲೊಂದು ಆತನ ಸನಿಹದಲ್ಲೇ ಬಡಿದಿದೆ.

ಒಳಾಂಗಣದ ಒಂದು ಭಾಗ ಸಂಪೂರ್ಣ ಛಿದ್ರವಾಗಿದೆ. ಅದೃಷ್ಟವಶಾತ್ ಬಚಾವ್ ಆದ ಡೇನಿಯಲ್, ಮನೆಯೊಳಕ್ಕೆ ಹೋದ. ಈ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದ್ದು, 3.5 ಮಿಲಿಯನ್ ಜನರು ಇದನ್ನು ವೀಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...