alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್ ಸುದ್ದಿ: ಈ ವಿಚಾರದಲ್ಲಿ ಭೂತಾನ್-ನೇಪಾಳಕ್ಕಿಂತ ಹಿಂದುಳಿದಿದೆ ಭಾರತ

ಸೆಂಟ್ರಲ್ ಬ್ಯೂರೋ ಆಫ್ ಹೆಲ್ತ್ ಇಂಟೆಲಿಜೆನ್ಸ್, ಮಂಗಳವಾರದಂದು ಆಘಾತಕಾರಿ ಮಾಹಿತಿಯೊಂದನ್ನು ಬಹಿರಂಗಪಡಿಸಿದೆ. ಭಾರತದ ಜಿಡಿಪಿಯಲ್ಲಿ ಕೇವಲ ಶೇಕಡ 1 ರಷ್ಟು ಹಣವನ್ನು ಸಾರ್ವಜನಿಕ ಆರೋಗ್ಯಕ್ಕೆ ವಿನಿಯೋಗಿಸಿರುವುದು ಬೆಳಕಿಗೆ ಬಂದಿದೆ.

ಈ ವಿಚಾರದಲ್ಲಿ ನೆರೆರಾಷ್ಟ್ರಗಳಾದ ಭೂತಾನ್ (2.5 %), ಶ್ರೀಲಂಕಾ (1.6 %) ಹಾಗೂ ನೇಪಾಳ (1.1 %) ಭಾರತಕ್ಕಿಂತ ಮುಂದಿದೆ. ಸಮಾಧಾನಕರ ಸಂಗತಿಯೆಂದರೆ 2014 ರಲ್ಲಿ ಶೇಕಡ 0.98 ರಷ್ಟು ಇದ್ದ ಈ ಪ್ರಮಾಣ 2018 ರಲ್ಲಿ ಶೇಕಡ 1 ಕ್ಕೆ ಏರಿಕೆಯಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಅಡಿಯಲ್ಲಿ ಬರುವ 10 ಆಗ್ನೇಯ ಏಷ್ಯಾ ದೇಶಗಳ ಪೈಕಿ ಭಾರತ 9ನೇ ಸ್ಥಾನದಲ್ಲಿದ್ದರೆ, ಶೇಕಡ 0.4 ಪ್ರಮಾಣದೊಂದಿಗೆ ಬಾಂಗ್ಲಾದೇಶ ಕೊನೆಯ ಸ್ಥಾನದಲ್ಲಿದೆ. ಸಾರ್ವಜನಿಕ ಆರೋಗ್ಯಕ್ಕೆ ವೆಚ್ಚ ಮಾಡುವ ಈ ದೇಶಗಳ ಪಟ್ಟಿಯಲ್ಲಿ ಶೇಕಡಾ 9.4 ಪ್ರಮಾಣದೊಂದಿಗೆ ಮಾಲ್ಡೀವ್ಸ್ ಪ್ರಥಮ ಸ್ಥಾನದಲ್ಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...