alex Certify
ಕನ್ನಡ ದುನಿಯಾ       Mobile App
       

Kannada Duniya

ತಲೆ ಕೆಡಿಸುತ್ತೆ ಆಲಿಂಗನ ಮಾಡಿಕೊಂಡಿರುವ ಈ ಜೋಡಿ ಫೋಟೋ

hugcoupleಜಾಲತಾಣದಲ್ಲಿ ಪ್ರತಿದಿನ ಚಿತ್ರ-ವಿಚಿತ್ರ ಫೋಟೋಗಳು ಅಪ್ ಲೋಡ್ ಆಗ್ತಾ ಇರುತ್ವೆ. ಕೆಲ ಫೋಟೋಗಳು ಆಶ್ಚರ್ಯ ಹುಟ್ಟಿಸುವಂತಿದ್ದರೆ, ಕೆಲ ಫೋಟೋಗಳು ಚರ್ಚೆಗೆ ಕಾರಣವಾಗುತ್ತವೆ. ಫೋಟೋ ಅಪ್ ಲೋಡ್ ಆಗಿ ಕೆಲವೇ ಗಂಟೆಗಳಲ್ಲಿ ವೈರಲ್ ಆಗುವ ಫೋಟೋಗಳಿಗೆ ಸಾಕಷ್ಟು ಕಮೆಂಟ್ ಕೂಡ ಬರುತ್ತೆ. ಈಗ ಎಲ್ಲರೂ ತಲೆ ಕೆಡಿಸಿಕೊಳ್ಳುವಂತಹ ಫೋಟೋವೊಂದು ಅಪ್ ಲೋಡ್ ಆಗಿದೆ.

ಬೀಚ್ ಬಳಿ ಒಂದು ಜೋಡಿ ಹಗ್ ಮಾಡಿದ ಫೋಟೋ ಇದು. ದೂರದಿಂದ ನೋಡಿದ್ರೆ ಆ ಫೋಟೋದಲ್ಲಿನ ವಿಶೇಷತೆಗಳೇನೂ ತಿಳಿಯುವುದಿಲ್ಲ. ಹತ್ತಿರದಿಂದ ಗಮನಿಸಿ ನೋಡಿದಾಗ ತಲೆ ಕೆಡಿಸಿಕೊಳ್ಳುವುದು ಗ್ಯಾರಂಟಿ. ಯಾಕೆಂದ್ರೆ ಈ ಫೋಟೋದಲ್ಲಿ ಯಾರು ಮುಂದಿದ್ದಾರೆ,ಯಾರು ಹಿಂದಿದ್ದಾರೆ ಎಂಬುದೇ ತಿಳಿಯುವುದಿಲ್ಲ.

ಹಿಂದೆ ಹುಡುಗಿ ಇದ್ದಾಳೆ. ಆದ್ರೆ ಆಕೆ ಕಾಲುಗಳು ಮುಂದಿವೆ. ಪಾದಗಳು ಹಿಂದಿವೆ. ಅದೇ ರೀತಿ ಹುಡುಗನ ಕಾಲುಗಳು ಹಿಂದಿದ್ದು, ಪಾದಗಳು ಮುಂದಿವೆ. ಈ ಫೋಟೋ ನೋಡಿದ ಜನರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ವ್ಯಕ್ತಿಯೊಬ್ಬ ಫೋಟೋ ಅಪ್ ಲೋಡ್ ಮಾಡಿ, ನನ್ನ ತಲೆ ತಿರುಗುತ್ತಿದೆ ಎಂದು ಹೇಳಿದ್ದಾನೆ. ಈ ಫೋಟೋವನ್ನು ಈವರೆಗೆ 16 ದಶಲಕ್ಷ ಜನ ನೋಡಿದ್ದಾರೆ. ಕೆಲವರು ಇದು ಫೋಟೋ ಎಡಿಟ್ ಮಾಡಲಾಗಿದೆ ಅಂದ್ರೆ ಮತ್ತೆ ಕೆಲವರು ತಮ್ಮದೆ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...