alex Certify
ಕನ್ನಡ ದುನಿಯಾ       Mobile App
       

Kannada Duniya

72 ವರ್ಷದವನನ್ನು ಮದುವೆಯಾಗಿ ಈಗ ರಕ್ಷಣೆ ಕೋರಿದ 20 ರ ಹುಡುಗಿ

ಪ್ರೀತಿ ಕುರುಡು ಎನ್ನುತ್ತಾರೆ. ಪ್ರೀತಿಗೆ ವಯಸ್ಸು, ಜಾತಿ, ಧರ್ಮದ ಗಡಿಯಿಲ್ಲ. ಆದ್ರೆ ಇದೇ ಕುರುಡು ಪ್ರೀತಿ ಕೆಲವೊಮ್ಮೆ ಸಂಕಷ್ಟ ತಂದೊಡ್ಡುತ್ತದೆ. ಇದಕ್ಕೆ ಆಸ್ಟ್ರೇಲಿಯಾದ ನಿನಾ ವಿಲ್ಸನ್ ಉತ್ತಮ ಉದಾಹರಣೆ. 20 ವರ್ಷದ ನಿನಾ 72 ವರ್ಷದ ಲಾಂಜ್ ಪ್ರೀತಿಗೆ ಬಿದ್ದಿದ್ದಳು. ಇಬ್ಬರಿಗೆ ಒಂದು ವರ್ಷದ ಮಗು ಕೂಡ ಇದೆ. ಆದ್ರೀಗ ನಿನಾ, ಲಾಂಜ್ ವಿರುದ್ಧ ದೂರು ನೀಡಿದ್ದಾಳೆ.

ಲಾಂಜ್ ಹಾಗೂ ನಿನಾ ಇಬ್ಬರೂ ನಿರಾಶ್ರಿತರು. ಇಬ್ಬರು ಬೀದಿ ಬೀದಿ ಸುತ್ತುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೀತಿ ಚಿಗುರಿದೆ. ಇಬ್ಬರೂ ಒಟ್ಟಿಗೆ ಜೀವನ ಶುರುಮಾಡಿದ್ದಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಕುಡಿತ ಹಾಗೂ ಜೂಜು ಕಲಿತಿರುವ ಲಾಂಜ್, ನಿನಾಗೆ ಹಿಂಸೆ ನೀಡ್ತಾನಂತೆ.

ಕುಡಿದು ಬಂದು ಮನಸ್ಸಿಗೆ ಬಂದಂತೆ ಥಳಿಸುವುದಲ್ಲದೆ ಮಗಳು ನನ್ನದಲ್ಲ ಎನ್ನುತ್ತಾನಂತೆ. ಈ ಸಂಬಂಧ ನಿನಾ ಪೊಲೀಸರಿಗೆ ದೂರು ನೀಡಿ ರಕ್ಷಣೆ ಕೋರಿದ್ದಾಳೆ. ನಿನಾ ಪ್ರೀತಿ ಕಥೆ, ಸಾಮಾಜಿಕ ಜಾಲತಾಣ ಹಾಗೂ ಆಸ್ಟ್ರೇಲಿಯಾ ಮಾಧ್ಯಮಗಳಲ್ಲಿ ಚರ್ಚೆಯ ವಿಷ್ಯವಾಗಿದೆ.

ಬಹುತೇಕರು ನಿನಾಗೆ ಬೆಂಬಲ ನೀಡಿದ್ದಾರೆ. ಹಾಗೆ ಪ್ರೀತಿ ಮಾಡುವಾಗ ನಿನಾ ವಯಸ್ಸಿನ ಬಗ್ಗೆ ಗಮನ ನೀಡಬೇಕಿತ್ತೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...