alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಆಸ್ಪತ್ರೆಯಲ್ಲಿ ನಡೆಯುತ್ತೆ ಎಕ್ಸ್ಟ್ರಾ ಅಫೇರ್ ಹೊಂದಿದವರಿಗೆ ಚಿಕಿತ್ಸೆ…!

ಚೀನಾದಲ್ಲಿ ಹೊಸ ಹಾಗೂ ಆಶ್ಚರ್ಯ ಹುಟ್ಟಿಸುವ ವ್ಯವಹಾರವೊಂದು ಪ್ರವರ್ಧಮಾನಕ್ಕೆ ಬರ್ತಿದೆ. ಇನ್ನೊಂದು ಸಂಬಂಧ ಇಟ್ಟುಕೊಂಡ ಪತಿಯನ್ನು ಸರಿದಾರಿಗೆ ತರುವ ಕೆಲಸ ನಡೆಯುತ್ತಿದೆ. ಗರ್ಲ್ ಫ್ರೆಂಡ್ ನಿಂದ ಅವನನ್ನು ದೂರ ಮಾಡಿ ದಾಂಪತ್ಯವನ್ನು ಉಳಿಸಲಾಗುತ್ತಿದೆ.

ಇದಕ್ಕೆ ಲವ್ವರ್ ಫೇಡಿಂಗ್ ಎಂದು ಕರೆಯಲಾಗುತ್ತದೆ. ಲವ್ವರ್ ಫೇಡಿಂಗ್ ಸಹಾಯ ಪಡೆದು ಸುಖಿ ದಾಂಪತ್ಯಕ್ಕೆ ವಿಲನ್ ಆಗಿ ಬಂದವರನ್ನು ಜೀವನದಿಂದ ದೂರ ಮಾಡಲು ಸಾವಿರಾರು ಡಾಲರ್ ಖರ್ಚು ಮಾಡುವವರಿದ್ದಾರೆ.

ಲವ್ ಆಸ್ಪತ್ರೆ ಸಂಸ್ಥಾಪಕಿ ಮಿಂಗ್ ಲೀ, ಸಹಾಯ ಕೇಳಿ ಬಂದ ಮಹಿಳೆಯರಿಗೆ ಯಶಸ್ವಿ ದಾಂಪತ್ಯದ ಗುಟ್ಟನ್ನು ಹೇಳಿ ಕೊಡುತ್ತಿದ್ದಾರೆ. ಈವರೆಗೆ ಸುಮಾರು 10 ಲಕ್ಷಕ್ಕೂ ಹೆಚ್ಚು ಮಂದಿ ಮಿಂಗ್ ಸಹಾಯ ಕೇಳಿ ಬಂದಿದ್ದಾರಂತೆ. ಚೀನಿ ಪ್ರೇಮಿಯನ್ನು ದೂರ ಮಾಡಲು ನಮ್ಮ ಬಳಿ 33 ದಾರಿಯಿದೆ ಎಂದು ಮಿಂಗ್ ಹೇಳಿದ್ದಾಳೆ.

ಪತಿ ಪ್ರೇಮಿ ಜೊತೆ ಮಾತನಾಡಿ ಬೇರೆ ಪ್ರೇಮಿ ಹುಡುಕಿಕೊಳ್ಳುವಂತೆ ಅವರ ಮನವೊಲಿಸುವುದು.

ಪತಿ ಬಾಸ್ ಜೊತೆ ಮಾತನಾಡಿ ಬೇರೆ ಕಡೆ ವರ್ಗ ಮಾಡುವಂತೆ ಮನವಿ ಮಾಡುವುದು.

ಕುಟುಂಬಸ್ಥರು ಹಾಗೂ ಸ್ನೇಹಿತರ ಜೊತೆ ಸೇರಿ ಪರಿಹಾರ ಕಂಡುಕೊಳ್ಳುವುದು.

ಪತಿಗೆ ಅನುವಂಶಿಕ ರೋಗವಿದೆ ಅಥವಾ ಬೇರೆ ಯಾವುದೋ ಖಾಯಿಲೆಯಿದೆ ಎಂದು ಪ್ರೇಮಿಯನ್ನು ನಂಬಿಸಿ ದೂರ ಕಳಿಸುವುದು ಸೇರಿದಂತೆ ಅನೇಕ ಸಲಹೆಗಳನ್ನು ಈ ಆಸ್ಪತ್ರೆಯಲ್ಲಿ ನೀಡಲಾಗುತ್ತದೆ.

ಚೀನಾದಲ್ಲಿ ಶ್ರೀಮಂತ ವ್ಯಕ್ತಿಗಳು ಎರಡನೇ ಪತ್ನಿ ಹೊಂದುವುದು ಸಾಮಾನ್ಯ ಸಂಗತಿಯಾಗಿದೆ. ಮಾವೊ ನಾಯಕತ್ವದಲ್ಲಿ ಇದು ತಪ್ಪು ಸಂಪ್ರದಾಯ ಹಾಗೂ ಕಾನೂನು ಬಾಹಿರವೆಂದು ಘೋಷಣೆ ಮಾಡಲಾಗಿದೆ. ಕಳೆದ 17 ವರ್ಷಗಳಿಂದ ಈ ಲವ್ ಆಸ್ಪತ್ರೆ ಕೆಲಸ ಮಾಡ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...