alex Certify
ಕನ್ನಡ ದುನಿಯಾ       Mobile App
       

Kannada Duniya

ತೆಗೆದುಕೊಳ್ಳೋರೇ ಇಲ್ಲದ ಕೋಟ್ಯಾಂತರ ರೂಪಾಯಿಯನ್ನು ಕೊಟ್ಟಿದ್ದೆಲ್ಲಿಗೆ ಗೊತ್ತಾ?

ಲಾಟರಿಯಲ್ಲಿ ಗೆದ್ದವರು ತಮ್ಮ ಹಣವನ್ನು ತೆಗೆದುಕೊಳ್ಳದ ಹಿನ್ನಲೆಯಲ್ಲಿ ಬಾಕಿ ಉಳಿದಿದ್ದ ಕೋಟ್ಯಾಂತರ ರೂಪಾಯಿಯನ್ನು ಶಾಲೆಗೆ ದಾನ ಮಾಡಿದ ಘಟನೆ ಅಮೆರಿಕದ ಮಿಚಿಗನ್ನಲ್ಲಿ ನಡೆದಿದೆ.

ಜುಲೈ 27 ರಂದು ಬಹುಮಾನದ ಹಣವನ್ನು ಪಡೆಯೋದಕ್ಕೆ ಅಂತಿಮ ದಿನಾಂಕವಾಗಿದ್ದರೂ ಆ ಹಣವನ್ನು ಗೆದ್ದಿದ್ದ ವ್ಯಕ್ತಿಗಳ್ಯಾರು ಬಂದಿರಲಿಲ್ಲ. ಹಾಗಾಗಿ 520 ಸಾವಿರ ಡಾಲರ್ ಹಣವನ್ನು ಅಂದ್ರೆ 3 ಕೋಟಿ 57 ಲಕ್ಷದ 31 ಸಾವಿರ 800 ರೂಪಾಯಿಯನ್ನ ಶಾಲೆಯೊಂದಕ್ಕೆ ದಾನದ ರೂಪದಲ್ಲಿ ನೀಡಲಾಗಿದೆ.

1998 ರಲ್ಲೂ ಇಂತದ್ದೇ ಘಟನೆ ನಡೆದಿತ್ತಂತೆ. ಲೋಟೋ ಲಾಟರಿಯ 34 ಮಿಲಿಯನ್ ಡಾಲರ್ ಹಣವನ್ನ ಗೆದ್ದವರು ಬಹುಮಾನದ ಹಣವನ್ನು ಪಡೆಯಲಿಲ್ಲ. ಆ ಹಣವನ್ನು ಕೂಡ ಆಗ ಸಾಮಾಜಿಕ ಸಂಸ್ಥೆಯೊಂದಕ್ಕೆ ದಾನದ ರೂಪದಲ್ಲಿ ನೀಡಲಾಗಿತ್ತಂತೆ.

ಮಿಚಿಗನ್ ಸ್ಟೇಟ್ ಲಾಟರಿ ಇಲಾಖೆಯ ಪ್ರಕಾರ ಪ್ರತಿ ಡಾಲರ್ನ ಶೇಕಡಾ 97ರಷ್ಟು ಭಾಗ ಲಾಟರಿ ಟಿಕೆಟ್ ಕೊಳ್ಳೋದಕ್ಕೆ ಜನರು ಖರ್ಚು ಮಾಡ್ತಾರಂತೆ. ಆ ಹಣವನ್ನು ಶಾಲೆಗೆ ಪರಿಹಾರದ ರೂಪದಲ್ಲಿ ದಾನವಾಗಿ ನೀಡಲಾಗ್ತಿದೆಯಂತೆ. ಹೀಗೆ ಪ್ರತಿ ವರ್ಷ ಶಾಲೆಗಳಿಗೆ ನೀಡಲಾಗ್ತಿರೋ ಹಣದ ಮೊತ್ತ 924.1 ಮಿಲಿಯನ್ ಅಂತ ಹೇಳಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...