alex Certify
ಕನ್ನಡ ದುನಿಯಾ       Mobile App
       

Kannada Duniya

ಪಿಟ್ ನಲ್ಲಿ ಅಡಗಿ ರೈಲು ಅಪಘಾತದಿಂದ ಆಶ್ಚರ್ಯಕರ ರೀತಿಯಲ್ಲಿ ಪಾರಾದ ಕುಟುಂಬ

ಲಂಡನ್: ಪಿಟ್ ನಲ್ಲಿ ಅಡಗಿದ ಕುಟುಂಬವೊಂದು ರೈಲು ಅಪಘಾತದಿಂದ ಪವಾಡ ಸದೃಶ್ಯ ರೀತಿಯಲ್ಲಿ ಪಾರಾದ ಘಟನೆ ಲಂಡನ್ ನಲ್ಲಿ ನಡೆದಿದೆ.

ಬೇಕರ್ ಸ್ಟ್ರೀಟ್ ನಿಲ್ದಾಣದ ಸುರಂಗದಲ್ಲಿ ರೈಲು ಹಾದುಹೋಗುವ ಸಂದರ್ಭಕ್ಕೆ ಮುನ್ನ ಮುಗ್ಗರಿಸಿ ಬಿದ್ದಿದ್ದ ಈ ಕುಟುಂಬ ಅಲ್ಲಿನ ಒಂದು ಪಿಟ್ ನಲ್ಲಿ ಕುಳಿತು ಪ್ರಾಣಾಪಾಯದಿಂದ ಪಾರಾಗಿದೆ ಎಂದು ಲಂಡನ್ ಸಾರಿಗೆ ಪೊಲೀಸರು ತಿಳಿಸಿದ್ದಾರೆ.

ಅಚ್ಚರಿ ಎಂದರೆ ಯಾರೊಬ್ಬರಿಗೂ ಘಟನೆಯಿಂದ ಗಾಯಗಳಾಗಿಲ್ಲ. ಕೂಡಲೇ ಅವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ತಪಾಸಣೆಗಾಗಿ ಆಸ್ಪತ್ರೆಗೂ ಕರೆದೊಯ್ಯಲಾಯಿತು.

ಮುಂದಿನ ರೈಲು ಯಾವಾಗ ಬರಬಹುದೆಂದು ಮಗು ಇದ್ದ ವಾಕರ್ ನೊಂದಿಗೆ ರೈಲು ಬರುವ ದಾರಿಯನ್ನು ಬಗ್ಗಿ ನೋಡುತ್ತಿದ್ದಾಗ ಮಹಿಳೆ ಫ್ಲಾಟ್ ಫಾರ್ಮ್ ಅಂತರ ತಿಳಿಯದೇ ಮಗುವಿನೊಂದಿಗೆ ಮುಗ್ಗರಿಸಿ ಟ್ರಾಕ್ ಮೇಲೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಆಕೆಯ ಪತಿ ಕೂಡ ಕೆಳಗೆ ಜಿಗಿದಿದ್ದಾನೆ. ಅಷ್ಟರಲ್ಲಾಗಲೇ ರೈಲು ಅದೇ ಹಾದಿಯಲ್ಲಿ ಬರುವುದು ಗೊತ್ತಾಗಿದೆ. ತಕ್ಷಣವೆ ಆಲ್ಲೇ ಇದ್ದ ಪಿಟ್ ನಲ್ಲಿ ಇಳಿದುಕೊಂಡಿದ್ದಾರೆ.

ರೈಲು ಹಾದುಹೋದ ನಂತರ ಅವರನ್ನು ಪೊಲೀಸರು ರಕ್ಷಿಸಿ ಮೇಲಕ್ಕೆ ಕರೆತಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...