alex Certify
ಕನ್ನಡ ದುನಿಯಾ       Mobile App
       

Kannada Duniya

ಬುದ್ಧನ ಪ್ರತಿಮೆಯನ್ನು ಭಾರತಕ್ಕೆ ಮರಳಿಸಿದ ಬ್ರಿಟನ್

ಬಿಹಾರ ನಳಂದ ವಸ್ತು ಸಂಗ್ರಹಾಲಯದಿಂದ 60 ವರ್ಷಗಳ ಹಿಂದೆ ಕಳ್ಳತನವಾಗಿದ್ದ, ಬುದ್ಧನ ಕಂಚಿನ ಪ್ರತಿಮೆಯನ್ನು ಲಂಡನ್ ಪೊಲೀಸರು, ಸ್ವಾತಂತ್ರ್ಯ ದಿನಾಚರಣೆಯಂದು ಭಾರತಕ್ಕೆ ಮರಳಿಸಿದ್ದಾರೆ.

ಮಾರ್ಚ್ ನಲ್ಲಿ ಲಂಡನ್ನಲ್ಲಿ ನಡೆಯುತ್ತಿದ್ದ ಪ್ರದರ್ಶನ ಹಾಗು ಮಾರಾಟ ಮೇಳವೊಂದರಲ್ಲಿ ವ್ಯಕ್ತಿಯೊಬ್ಬರು ಬುದ್ಧನ ಪ್ರತಿಮೆ ನೋಡಿದ್ದಾರೆ. ಆದರೆ ಇದನ್ನು ಖರೀದಿ ಮಾಡುವ ಸಂದರ್ಭ ವಿಗ್ರಹದ ಐತಿಹಾಸಿಕ ಮಹತ್ವದ ಕುರಿತು ತಿಳಿದಿರಲಿಲ್ಲ.

ಪ್ರದರ್ಶನದಲ್ಲಿ ಈ ಮೂರ್ತಿಯನ್ನು ನೋಡಿದ ಅಧಿಕಾರಿಯೊಬ್ಬರು, ಈ ಬುದ್ಧನ ಮೂರ್ತಿ ಭಾರತಕ್ಕೆ ಸೇರಿದ್ದು ಎಂದು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮೂರ್ತಿಯನ್ನು ನೀಡುವಂತೆ ನಳಂದ ವಸ್ತು ಸಂಗ್ರಹಾಲಯ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಬ್ರಿಟನ್ ಸ್ಪಂದಿಸಿರಲಿಲ್ಲ. ಕೊನೆಗೆ ಆಗಸ್ಟ್ 15 ರಂದು ಬ್ರಿಟನ್ ನ ಮೆಟ್ರೋಪಾಲಿಟನ್ ನಗರಸಭೆಯು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮೂರ್ತಿಯನ್ನು ಭಾರತಕ್ಕೆ ಉಡುಗೊರೆಯಾಗಿ ನೀಡಿದೆ.

12ನೇ ಶತಮಾನದಲ್ಲಿ ತಯಾರಿಸಲಾಗಿದ್ದ ಒಟ್ಟು 14 ಕಂಚಿನ ಬುದ್ಧನ ಮೂರ್ತಿಗಳಲ್ಲಿ ಪೈಕಿ ಇದು ಒಂದು. 1961ರಲ್ಲಿ ನಳಂದಾ ಪುರಾತತ್ವ ಸಂಗ್ರಹಾಲದಿಂದ ಕಳ್ಳತನ ಮಾಡಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...