alex Certify
ಕನ್ನಡ ದುನಿಯಾ       Mobile App
       

Kannada Duniya

ಗುಂಡಿನ ಸದ್ದಿಗೆ ದಿಕ್ಕಾಪಾಲಾಗಿ ಓಡಿದ ಜನ

ಲಂಡನ್: ಈಜಿಪ್ಟ್ ನಲ್ಲಿ ಉಗ್ರರು ಅಟ್ಟಹಾಸ ಮೆರೆದ ಬೆನ್ನಲ್ಲೇ ಲಂಡನ್ ನಲ್ಲಿಯೂ ಉಗ್ರರು ದಾಳಿ ನಡೆಸಿದ್ದಾರೆ. ಲಂಡನ್ ನ ಆಕ್ಸ್ ಫರ್ಡ್ ಸರ್ಕಸ್ ಸ್ಟೇಷನ್ ಬಳಿ ಆಗಂತುಕರು ಗುಂಡಿನ ದಾಳಿ ನಡೆಸಿದ್ದು, 9 ಮಂದಿ ಗಾಯಗೊಂಡಿದ್ದಾರೆ.

ಹೆಚ್ಚಿನ ಸಂದಣಿ ಇದ್ದ ಸಂದರ್ಭದಲ್ಲಿಯೇ ಭಾರೀ ಗುಂಡಿನ ಸದ್ದು ಮೊಳಗಿದ್ದರಿಂದ ಜನರೆಲ್ಲಾ ದಿಕ್ಕಾಪಾಲಾಗಿ ಓಡಿದ್ದಾರೆ. ಫೈರಿಂಗ್ ಮಾಡಿದವರ ಮಾಹಿತಿ ಗೊತ್ತಾಗಿಲ್ಲ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಇಡೀ ಪ್ರದೇಶವನ್ನು ಸುತ್ತುವರೆದು ಪರಿಶೀಲನೆ ನಡೆಸಲಾಗಿದೆ.

ಆರೋಪಿಗಳ ಸುಳಿವು ಪತ್ತೆಯಾಗಿಲ್ಲ. ಘಟನಾ ಸ್ಥಳಗಳಲ್ಲಿನ ಸಿ.ಸಿ. ಟಿ.ವಿ. ದೃಶ್ಯಗಳನ್ನಾಧರಿಸಿ ಶಂಕಿತರ ಫೋಟೋ ಬಿಡುಗಡೆ ಮಾಡಲಾಗಿದೆ. ಪ್ರತ್ಯಕ್ಷದರ್ಶಿಗಳು ತಮ್ಮಲ್ಲಿನ ಮಾಹಿತಿ ಹಂಚಿಕೊಳ್ಳುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಇಡೀ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ದಾಳಿ ನಡೆಸಿದವರು ಉಗ್ರರೇ ಅಥವಾ ಬೇರೆಯವರೇ ಎಂಬುದು ಗೊತ್ತಾಗಿಲ್ಲ ತನಿಖೆ ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...