alex Certify
ಕನ್ನಡ ದುನಿಯಾ       Mobile App
       

Kannada Duniya

ಲಂಡನ್ ಮೇಯರ್ ಗೆ ಬಂದ ದುಃಸ್ಥಿತಿ ನೋಡಿದ್ರಾ…?

2018ರ ಜುಲೈನಲ್ಲಿ ಲಂಡನ್ ಪ್ರವಾಸಕ್ಕೆ ಬಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೃಹದಾಕಾರದ ಬಲೂನ್ ಪಾರ್ಲಿಮೆಂಟ್ ಭವನದ ಮುಂದೆ ಹಾರಾಡಿದ ಘಟನೆ ನಿಮಗೆ ನೆನಪಿರಬೇಕಲ್ವಾ. ಈಗ ಅಂತದ್ದೇ ಘಟನೆ ಲಂಡನ್ ಮೇಯರ್ ಸಾದಿಕ್ ಖಾನ್ ಅವರ ವಿಚಾರದಲ್ಲೂ ನಡೆದಿದೆ.

29 ಅಡಿ ಉದ್ದದ ದೈತ್ಯಾಕಾರ ಹಳದಿ ಬಣ್ಣದ ಬಿಕಿನಿ ಬಲೂನ್ ನ್ನ ಪ್ರತಿಭಟನಾಕಾರರು ಈಗ ಲಂಡನ್ ಪಾರ್ಲಿಮೆಂಟ್ ಭವನದ ಸಮೀಪದಲ್ಲಿ ಹಾರಿಬಿಟ್ಟಿದ್ದಾರೆ. ಲಂಡನ್ ಮೇಯರ್ ಅವರ ಆಡಳಿತ ವೈಖರಿಯನ್ನ ವಿರೋಧಿಸುವವರೆಲ್ಲಾ ಅಭಿಯಾನದ ರೂಪದಲ್ಲಿ ಈ ಕಾರ್ಯವನ್ನು ಕೈಗೊಂಡಿದ್ದಾರೆ. ಬಿಕಿನಿ ಧರಿಸಿದ ದೈತ್ಯಾಕಾರದ ಸಾದಿಕ್ ಖಾನ್ ಅವರ ಬಲೂನ್ ಗೆ 3400 ಮಂದಿ 58,512 ಪೌಂಡ್ ದೇಣಿಗೆ ನೀಡಿದ್ದಾರೆ.

ಲಂಡನ್ ನಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಬೀಳದ ಹಿನ್ನಲೆಯಲ್ಲಿ ಸಾರ್ವಜನಿಕರು ಕ್ರೌಡ್ ಫಂಡಿಂಗ್ ಪೇಜ್ ಒಂದನ್ನ ತೆರೆದಿದ್ದಾರೆ. ಮೇಕ್ ಲಂಡನ್ ಸೇಫ್ ಅಗೇನ್ ಅಭಿಯಾನದ ಅಡಿಯಲ್ಲಿ ಸಾದಿಕ್ ಖಾನ್ ಅವರ ಆಡಳಿತ ವೈಖರಿಯನ್ನು ಖಂಡಿಸುತ್ತಿದ್ದಾರೆ. 2020ರ ಚುನಾವಣೆಗೆ ಸ್ಪರ್ಧಿಸಬೇಕು ಅಂತ ನಿರ್ಧರಿಸಿರುವ ಸಾದಿಕ್ ಖಾನ್ ಗೆ ಪಕ್ಷ ಅವಕಾಶ ನೀಡಬಾರದು ಅಂತ ಜನರು ಈ ಮೂಲಕ ಒತ್ತಾಯಿಸುತ್ತಿದ್ದಾರೆ.

ಸಾದಿಕ್ ಖಾನ್ ಲಂಡನ್ ಮೇಯರ್ ಆಗಿ ಅಧಿಕಾರ ವಹಿಸಿದ ನಂತರದಲ್ಲಿ 2018ರಲ್ಲಿ 81 ಕೊಲೆಗಳಾಗಿವೆ. ಹಾಗಾಗಿಯೇ ಲಂಡನ್ ನಿವಾಸಿಗಳು ಮೇಯರ್ ಆಡಳಿತದ ವಿರುದ್ಧ ಸಮರ ಸಾರಿದ್ದಾರೆ.

ಜನರ ಪ್ರತಿಭಟನೆಗೆ ಸಾದಿಕ್ ಖಾನ್ ಪ್ರತಿಕ್ರಿಯಿಸಿದ್ದು, ಇದರಲ್ಲಿ ಜನರು ತಮ್ಮ ರಜೆಯ ದಿನವನ್ನು ಹೀಗೆ ಕಳೆಯಬೇಕು ಅಂತ ನಿರ್ಧರಿಸಿದ್ದರೆ ಅದಕ್ಕೆ ನಾನೇನು ಮಾಡೋದಕ್ಕೆ ಸಾಧ್ಯವಿಲ್ಲ. ಆದರೆ ನನ್ನ ಆಡಳಿತದಲ್ಲಿ ಲಂಡನ್ ನಿವಾಸಿಗಳು ಒಳಿತು ಕಂಡಿದ್ದಾರೆ ಅಂತ ಪ್ರತಿಕ್ರಿಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...