alex Certify
ಕನ್ನಡ ದುನಿಯಾ       Mobile App
       

Kannada Duniya

ಮೂಡ್ ಹಾಳಾಗೋದಕ್ಕೆ ಇದು ಕೂಡ ಕಾರಣ

smar pone see

ವಿಶ್ವದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಅದರಲ್ಲಿಯೂ, ಸ್ಮಾರ್ಟ್ ಫೋನ್ ಬಳಸುವವರು ಜಾಸ್ತಿ. ಸ್ಮಾರ್ಟ್ ಫೋನ್ ಕೈಯಲ್ಲಿದ್ದರೆ ಕೇಳಬೇಕೆ? ಇಂಟರ್ ನೆಟ್, ಸಾಮಾಜಿಕ ಜಾಲತಾಣ ಇದ್ದೇ ಇರುತ್ತದೆ.

ಸ್ಮಾರ್ಟ್ ಫೋನ್ ಕೈಯಲ್ಲಿದ್ದರೆ, ಹೊತ್ತು ಕಳೆದಿದ್ದೇ ಗೊತ್ತಾಗಲ್ಲ. ಕೆಲವರಂತೂ ಫೋನ್ ಪ್ರಪಂಚದಿಂದ ಹೊರಗೇ ಬರಲ್ಲ. ಲಂಡನ್ ವಿಶ್ವವಿದ್ಯಾಲಯ ಕಾಲೇಜ್ ನಡೆಸಿದ ಸಮೀಕ್ಷೆಯೊಂದರಲ್ಲಿ ವ್ಯಕ್ತಿಯೊಬ್ಬನ ದಿನದ ಸಮಯದಲ್ಲಿ ಶೇ.28 ರಷ್ಟನ್ನು ಸ್ಮಾರ್ಟ್ ಫೋನ್ ಹಾಳು ಮಾಡುತ್ತವೆ ಎಂಬುದು ಗೊತ್ತಾಗಿದೆ. ಹೀಗೆ ಪದೇ ಪದೇ ಸ್ಮಾರ್ಟ್ ಫೋನ್ ವೀಕ್ಷಣೆ ಮಾಡುವುದರಿಂದ, ಮೂಡ್ ಹಾಳಾಗಿ ಹೋಗುತ್ತದೆ. ವಿರಾಮದ ಸಮಯದಲ್ಲಿಯೂ, ಫೋನ್ ಹೆಚ್ಚು ಸಮಯ ವ್ಯರ್ಥ ಮಾಡುತ್ತದೆ.

ಅತಿಯಾಗಿ ಸ್ಮಾರ್ಟ್ ಫೋನ್ ನೋಡುವುದರಿಂದ ಮನಸ್ಸಿನ ಸಂತೋಷ ಹಾಳಾಗುತ್ತದೆ. ವಿವಿಧ ಪ್ರದೇಶಗಳ 450 ಪುರುಷ ಮತ್ತು ಮಹಿಳೆಯರನ್ನು ಸಮೀಕ್ಷೆಯಲ್ಲಿ ಸಂದರ್ಶಿಸಿದ್ದು, ಫೋನ್ ಬಳಸುವ ಸಂದರ್ಭ, ಮನಸ್ಥಿತಿ, ವರ್ತನೆ ಬಗ್ಗೆ ಕೇಳಿದಾಗ ಫೋನ್ ನೋಡೋದ್ರಿಂದ ಮೂಡ್ ಹಾಳಾಗುತ್ತದೆ. ಸಮಯ, ಸಂತೋಷ ಕಳೆದು ಹೋಗುತ್ತದೆ ಎಂಬ ಮಾಹಿತಿ ಗೊತ್ತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...