alex Certify
ಕನ್ನಡ ದುನಿಯಾ       Mobile App
       

Kannada Duniya

ಲಂಡನ್ ನಲ್ಲಿ ಮತ್ತೆ ಉಗ್ರರ ಅಟ್ಟಹಾಸ

london-atak

ಲಂಡನ್: ಲಂಡನ್ ನಲ್ಲಿ ಭಯೋತ್ಪಾದಕರು ಅಟ್ಟಹಾಸ ನಡೆಸಿದ್ದು, ಪಾದಚಾರಿಗಳ ಮೇಲೆ ವಾಹನ ಹರಿಸಿದ್ದಲ್ಲದೇ, ದಾರಿಯಲ್ಲಿ ಸಿಕ್ಕ, ಸಿಕ್ಕವರನ್ನು ಹರಿತವಾದ ಚಾಕುಗಳಿಂದ ಇರಿದಿದ್ದಾರೆ.

ಲಂಡನ್ ನ 3 ಸ್ಥಳದಲ್ಲಿ ದಾಳಿ ಮಾಡಲಾಗಿದೆ. ಮೊದಲಿಗೆ ಲಂಡನ್ ಬ್ರಿಡ್ಜ್ ಬಳಿ ಪಾದಚಾರಿಗಳ ಮೇಲೆ ಟೆಂಪೋ ನುಗ್ಗಿಸಿದ್ದಾರೆ. ಬಳಿಕ ಬರೋವಾ ಮಾರ್ಕೇಟ್ ಬಳಿ, ನಂತರ ದಿ ವೈಕ್ಸೋಲ್ ನಲ್ಲಿ ದಾಳಿ ಮಾಡಿದ್ದಾರೆ.

ಘಟನೆಯಲ್ಲಿ 7 ಮಂದಿ ನಾಗರೀಕರು ಪ್ರಾಣ ಕಳೆದುಕೊಂಡಿದ್ದು, ಅಪಾರ ಸಂಖ್ಯೆಯ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಲಂಡನ್ ನಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಏಕಕಾಲಕ್ಕೆ ಉಗ್ರರು ದಾಳಿ ನಡೆಸಿದ್ದ 3 ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ದಾಳಿ ನಡೆಸಿದ್ದ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದ್ದು, ಉಳಿದವರಿಗಾಗಿ ಶೋಧ ಕಾರ್ಯ ನಡೆದಿದೆ.

ಘಟನೆಯನ್ನು ಖಂಡಿಸಿರುವ ಪ್ರಧಾನಿ ಥೆರೆಸಾ ಮೇ ಭಯೋತ್ಪಾದಕರನ್ನು ಸದೆ ಬಡಿಯಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...