alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನ ತುರ್ತು ಭೂ ಸ್ಪರ್ಶ: ಕಾರಣ ಗೊತ್ತಾ..?

mea

ಲಂಡನ್: ಬೈರೂತ್ ಮಿಡ್ಲ್ ಈಸ್ಟ್ ಏರ್ ಲೈನ್ಸ್ ಗೆ ಸೇರಿದ ವಿಮಾನ, ಇಸ್ತಾಂಬುಲ್ ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಲಂಡನ್ ನಿಂದ ಹೊರಟಿದ್ದ ಮಿಡ್ಲ್ ಈಸ್ಟ್ ಏರ್ ಲೈನ್ಸ್ ಗೆ ಸೇರಿದ ವಿಮಾನ 30,000 ಅಡಿ ಎತ್ತರದಲ್ಲಿ ಹಾರಾಟದಲ್ಲಿತ್ತು.

ಈ ಸಂದರ್ಭದಲ್ಲಿ 70 ವರ್ಷದ ಹಿರಿಯ ಪ್ರಯಾಣಿಕನೊಬ್ಬ ಅವಾಂತರ ಸೃಷ್ಠಿಸಿದ್ದಾನೆ. ತನ್ನ ಪತ್ನಿ ಹಾಗೂ ಸಹ ಪ್ರಯಾಣಿಕರೊಂದಿಗೆ ಜಗಳವಾಡಿದ್ದಾನೆ.

ಸಮಾಧಾನಪಡಿಸಲು ಬಂದ ಗಗನಸಖಿಯರಿಬ್ಬರ ಮೇಲೆ ಹಲ್ಲೆ ಮಾಡಿದ್ದು, ಆತನನ್ನು ಸಮಾಧಾನಪಡಿಸಲಾಗಿದೆ. ಕೆಲ ಸಮಯದಲ್ಲೇ ಮತ್ತೆ ಎಲ್ಲರನ್ನೂ ಬೈದಾಡಿದ ವೃದ್ಧ, ಗಗನಸಖಿಗೆ ಮುಷ್ಠಿಯಿಂದ ಗುದ್ದಿದ್ದಾನೆ. ಗಲಾಟೆ ನಡೆಸಿದ್ದಾನೆ.

ವೃದ್ಧನ ಅವಾಂತರಕ್ಕೆ ಬೆದರಿದ ಪೈಲಟ್, ಇಸ್ತಾಂಬುಲ್ ಅಟಾಟುರ್ಕ್ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ್ದಾರೆ. ವೃದ್ಧನನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ. ಪೆಟ್ಟಾಗಿರುವ ಗಗನಸಖಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...