alex Certify
ಕನ್ನಡ ದುನಿಯಾ       Mobile App
       

Kannada Duniya

‘ಭಾರತ-ಅಮೆರಿಕ ಜತೆಯಾದರೆ ಜಗತ್ತಿಗೆ ಲಾಭ’

imodi-s

ವಾಷಿಂಗ್ಟನ್: ಭಾರತ ಮತ್ತು ಅಮೆರಿಕ ಒಂದಾಗಿ ಸಾಗಿದಾಗ ಅದರ ಲಾಭ ಜಗತ್ತಿಗೆ ಆಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಾಲ್ ಸ್ಟ್ರೀಟ್ ಜರ್ನಲ್ ನಲ್ಲಿ ಮೋದಿ ಲೇಖನ ಪ್ರಕಟವಾಗಿದ್ದು, 2016 ರ ಜೂನ್ ನಲ್ಲಿ ಅಮೆರಿಕ ಭೇಟಿಯ ಸಂದರ್ಭದಲ್ಲಿ ಕಾಂಗ್ರೆಸ್(ಸಂಸತ್) ಉದ್ದೇಶಿಸಿ ಮಾತನಾಡಿದ್ದನ್ನು ನೆನಪಿಸಿಕೊಂಡಿರುವ ಅವರು, 1 ವರ್ಷದ ಬಳಿಕ ಮತ್ತೆ ವಾಷಿಂಗ್ಟನ್ ಗೆ ಬಂದಿದ್ದೇನೆ. ಎರಡೂ ದೇಶಗಳು ಇನ್ನಷ್ಟು ಹತ್ತಿರವಾಗಿವೆ ಎಂದು ತಿಳಿಸಿದ್ದಾರೆ.

ಭಾರತ ಮತ್ತು ಅಮೆರಿಕದ ಸಂಬಂಧಗಳು ಆಳವಾಗಿ ಬೇರೂರತೊಡಗಿವೆ. ಭಯೋತ್ಪಾದನೆ, ಬೆದರಿಕೆಗಳಿಂದ ವಿಶ್ವವನ್ನು ಸುರಕ್ಷಿತಗೊಳಿಸಲು ಎರಡೂ ದೇಶಗಳ ಹಿತಾಸಕ್ತಿ ಒಂದೇ ಆಗಿದೆ ಎಂದು ಹೇಳಿದ್ದಾರೆ.

ಭಾರತ ಮತ್ತು ಅಮೆರಿಕ ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡಲಿವೆ. ಇವೆರಡೂ ಜತೆಯಾಗಿ ಸಾಗಿದರೆ, ಒಗ್ಗೂಡಿ ಕೆಲಸ ಮಾಡಿದರೆ, ಜಗತ್ತಿಗೆ ಲಾಭವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...