alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಪ್ಪುಗಟ್ಟಿದ್ದ ನದಿಯಲ್ಲಿತ್ತು ಬೆಚ್ಚಿಬೀಳಿಸುವಂಥ ವಸ್ತು

ರಷ್ಯಾದ ನಾಗರಿಕರು ಬೆಚ್ಚಿಬೀಳುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಹೆಪ್ಪುಗಟ್ಟಿದ ಸರೋವರದಲ್ಲಿ 54 ಮನುಷ್ಯರ ಕೈಗಳು ಪತ್ತೆಯಾಗಿವೆ. ಚೀನಾ ಗಡಿಯ ಸಮೀಪದಲ್ಲಿರುವ ಸೈಬೀರಿಯಾದಲ್ಲಿ ಕತ್ತರಿಸಿದ ಮನುಷ್ಯರ ಕೈಗಳು ಸಿಕ್ಕಿವೆ.

ಬ್ಯಾಗ್ ಒಂದರಲ್ಲಿ ಒಟ್ಟು 27 ಜೊತೆ ಕೈಗಳನ್ನು ತುಂಬಿಸಿ ಇಡಲಾಗಿತ್ತು. ಸಂಪೂರ್ಣ ಹೆಪ್ಪುಗಟ್ಟಿರುವ ಅಮುರ್ ನದಿಯಲ್ಲಿ ಕೈಗಳಿದ್ದ ಬ್ಯಾಗ್ ಸಿಕ್ಕಿದೆ. ಈ ಕೈಗಳು ಯಾರದ್ದು? ಅದನ್ನು ಕತ್ತರಿಸಿ ಚೀಲದಲ್ಲಿ ತುಂಬಿಸಿ ಬಿಸಾಡಿದವರು ಯಾರು ಅನ್ನೋದು ನಿಗೂಢವಾಗಿದೆ.

ಕೆಲವು ಕೈಗಳ ಮೇಲೆ ಬೆರಳಚ್ಚು ಕೂಡ ಪತ್ತೆಯಾಗಿದೆ. ಕಳ್ಳತನ ಮಾಡಿದವರಿಗೆ ಶಿಕ್ಷೆಯಾಗಿ ಕೈಗಳನ್ನು ಕತ್ತರಿಸಿ ಹಾಕಿರಬಹುದು ಅನ್ನೋ ಅನುಮಾನ ವ್ಯಕ್ತವಾಗಿದೆ. ಅಥವಾ ಆಸ್ಪತ್ರೆಯಲ್ಲಿರೋ ಮೃತದೇಹಗಳ ಕೈಗಳಿರಬಹುದು ಅಂತಾನೂ ಹೇಳಲಾಗ್ತಿದೆ. ದೇಹದ ಅಂಗಾಂಗ ಕದಿಯುವ ದೊಡ್ಡ ಜಾಲವೇ ಇದರ ಹಿಂದಿರಬಹುದು ಅನ್ನೋ ಶಂಕೆಯೂ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...