alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಬಾಲಕಿ ಆತ್ಮಹತ್ಯೆಯ ವಿಡಿಯೋ

suicide

ಮಿಯಾಮಿಯಲ್ಲಿ 12 ವರ್ಷದ ಬಾಲಕಿಯೊಬ್ಬಳು ತನ್ನ ಆತ್ಮಹತ್ಯೆ ದೃಶ್ಯವನ್ನು ಸಾಮಾಜಿಕ ತಾಣಗಳಲ್ಲಿ ನೇರ ಪ್ರಸಾರ ಮಾಡಿದ್ದಾಳೆ. ಈ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿದೆ. ಉತ್ತರ ಜಾರ್ಜಿಯಾದ 12 ವರ್ಷದ ಬಾಲಕಿ ಕಟೆಲಿನ್ ನಿಕೋಲೆ ಡೇವಿಸ್ ಎಂಬಾಕೆ ಡಿಸೆಂಬರ್ 30ರಂದು 40 ನಿಮಿಷದ ವಿಡಿಯೋ ಒಂದನ್ನು ಸಾಮಾಜಿಕ ತಾಣದಲ್ಲಿ ಹಾಕಿದ್ದಾಳೆ.

ಮನೆಯ ಮುಂಭಾಗದ ಪ್ರಾಂಗಣದಲ್ಲಿ ಮೊಬೈಲ್ ಕ್ಯಾಮರಾ ಆನ್ ಮಾಡಿಟ್ಟುಕೊಂಡು ಮರಕ್ಕೆ ಹಗ್ಗ ಕಟ್ಟಿ ಸ್ನೇಹಿತರು, ಹೆತ್ತವರಿಗೆ ಗುಡ್ ಬೈ ಹೇಳಿ ಲೈವ್ ನಲ್ಲೇ ನೇಣು ಹಾಕಿಕೊಂಡಿದ್ದಾಳೆ. ನನ್ನನ್ನು ಕ್ಷಮಿಸಿ, ನಾನು ಸುಂದರವಾಗಿಲ್ಲ ಹಾಗಾಗಿ ಸಾಯುತ್ತಿದ್ದೇನೆ ಅಂತ ಹೇಳಿದ ಯುವತಿ ನೇಣಿಗೆ ಶರಣಾಗಿದ್ದಾಳೆ.

ಸಾವಿಗೂ ಕೆಲವು ದಿನಗಳ ಮುಂಚೆ ಸಹ ಡೇವಿಸ್ ವಿಡಿಯೋ ಒಂದನ್ನು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ಲು. ತನ್ನ ಮೇಲೆ ಕುಟುಂಬ ಸದಸ್ಯರೇ ಅತ್ಯಾಚಾರ ಮಾಡಿದ್ದಾರೆ ಅಂತಾ ಹೇಳಿಕೊಂಡಿದ್ದಳು. ಸಾಮಾಜಿಕ ತಾಣಗಳಲ್ಲಿ ಹಾಗೂ ಟಿವಿಯಲ್ಲಿ ಪ್ರಸಾರವಾಗ್ತಾ ಇರೋ ಆತ್ಮಹತ್ಯೆ ವಿಡಿಯೋವನ್ನು ತೆಗೆದುಹಾಕಲು ಪೊಲೀಸರು ಹರಸಾಹಸಪಡ್ತಿದ್ದಾರೆ. ಈ ವಿಡಿಯೋ ಬೇರೆ ಮಕ್ಕಳ ಮೇಲೆ ಕೂಡ ಕೆಟ್ಟ ಪರಿಣಾಮ ಬೀರಬಹುದು ಅಂತಾ ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...