alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆರಿಕಾದಲ್ಲಿ ಭಾರತೀಯ ತಿಂಡಿ ದರ್ಬಾರ್

yem-20-1

ಬಿಹಾರ-ಜಾರ್ಖಂಡದ ಸಾಂಪ್ರದಾಯಿಕ ತಿಂಡಿ ಸಮುದ್ರದಾಚೆಗೂ ಪ್ರಸಿದ್ಧಿ ಪಡೆದಿದೆ. ಅಮೆರಿಕಾದ ಉತ್ತರ ಕೆರೊಲಿನ್, ದಕ್ಷಿಣ ಕೆರೊಲಿನ್, ನ್ಯೂಯಾರ್ಕ್, ನ್ಯೂಜೆರ್ಸಿ, ಫ್ಲೋರಿಡಾ ಮತ್ತು ಮೇರಿ ಲ್ಯಾಂಡ್ ಸೇರಿದಂತೆ ಅನೇಕ ನಗರಗಳಲ್ಲಿ ಲಿಟ್ಟಿ ಚೋಕ ತಿಂಡಿ ಮೆಚ್ಚುಗೆ ಗಳಿಸಿದೆ.

ರಾಂಚಿಯ ಸೇಂಟ್ ಕ್ಸೇವಿಯರ್ ಕಾಲೇಜಿನ ಹಳೆ ವಿದ್ಯಾರ್ಥಿಗಳು ಬಿಹಾರದ ಅಚ್ಚುಮೆಚ್ಚಿನ ತಿಂಡಿ ಲಿಟ್ಟಿ ಚೋಕವನ್ನು ವಿಶ್ವ ಪ್ರಸಿದ್ಧಗೊಳಿಸಿದ್ದಾರೆ. ಉತ್ತರ ಕೆರೊಲಿನ್ ನಲ್ಲಿ ಕೆಲ ತಿಂಗಳ ಹಿಂದೆ ನಡೆದ ಷಾರ್ಲೆಟ್ ನಲ್ಲಿ ನಡೆದ ಇಂಡಿಯನ್ ಫೇರ್ ಕಾರ್ಯಕ್ರಮದಲ್ಲಿ ಚಿಕ್ಕ ಸ್ಟಾಲ್ ನಲ್ಲಿ ಲಿಟ್ಟಿ ಚೋಕ ಇಡಲಾಗಿತ್ತು. ನೋಡ್ತಾ ನೋಡ್ತಾ ಇದ್ದಂತೆ ಒಂದೇ ದಿನದಲ್ಲಿ ನಾಲ್ಕು ಗಂಟೆಯಲ್ಲಿಯೇ ಸ್ಟಾಲ್ ನಲ್ಲಿದ್ದ ಎಲ್ಲ ಲಿಟ್ಟಿ ಚೋಕ ಖಾಲಿಯಾಗಿತ್ತು.

ಬ್ಯಾಂಕ್ ಆಫ್ ಅಮೆರಿಕಾದ ಉಪಾಧ್ಯಕ್ಷ ಅಭಿಷೇಕ್ ಸಿನ್ಹಾ ಸೆಪ್ಟೆಂಬರ್ ನಲ್ಲಿ ಬಿಹಾರ್ ಹಾಗೂ ಜಾರ್ಖಂಡ್ ನ ಕೆಲ ಜನರ ಜೊತೆ ಸೇರಿ ಇಂಡಿಯನ್ ಫೇರ್ ನಲ್ಲಿ ಸ್ಟಾಲ್ ಹಾಕಿದ್ದರು. ಸಮೋಸಾ, ಲಿಟ್ಟಿ ಚೋಕ ಹಾಗೂ ಕೆಲ ತಿಂಡಿಗಳನ್ನು ಇಡಲಾಗಿತ್ತು. ಅದ್ರಲ್ಲಿ ಲಿಟ್ಟಿ ಚೋಕ ಅಮೆರಿಕಾ ಜನರ ಮನಸ್ಸು ಕದ್ದಿದೆ. ಅವರು ಇಷ್ಟಪಟ್ಟು ತಿಂದಿದ್ದು ನೋಡಿ ಆಶ್ಚರ್ಯವಾಯ್ತು ಎನ್ನುತ್ತಾರೆ ಅಭಿಷೇಕ್.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...