alex Certify
ಕನ್ನಡ ದುನಿಯಾ       Mobile App
       

Kannada Duniya

ಪೋಪ್ ಗೆ ಬಂದಿದೆ ಬರಿಗಣ್ಣಿನಿಂದ ನೋಡಲು ಅಸಾಧ್ಯವಾದ ಗಿಫ್ಟ್

ಉಡುಗೊರೆ ಕೊಡೋದು ಕೂಡ ಒಂದು ಕಲೆ. ಈ ಬಾರಿ ಕ್ರಿಸ್ಮಸ್ ಗೆ ಪೋಪ್ ಫ್ರಾನ್ಸಿಸ್ ಅವರಿಗೆ ವಿಶಿಷ್ಟವಾದ ಗಿಫ್ಟ್ ಬಂದಿದೆ. ಅದು ಅಂತಿಂಥಾ ಉಡುಗೊರೆಯಲ್ಲ, ಅದನ್ನು ಬರಿಗಣ್ಣಿನಿಂದ ನೋಡೋದು ಅಸಾಧ್ಯ.

ಮೈಕ್ರೋಸ್ಕೋಪ್ ನಲ್ಲಿ ಮಾತ್ರ ವೀಕ್ಷಿಸಬಹುದಾದಷ್ಟು ಚಿಕ್ಕದಾಗಿದೆ. ವಿಲ್ನಿಯಸ್ ನ ವಿಜ್ಞಾನಿಗಳು ಪೋಪ್ ಗಾಗಿ ಈ ಉಡುಗೊರೆಯನ್ನು ತಯಾರಿಸಿದ್ದಾರೆ. ಕ್ರಿಸ್ಮಸ್ ನೇಟಿವಿಟಿ ದೃಶ್ಯ ಇದು.

ವಿಲ್ನಿಯಸ್ ನ ಡೌನ್ ಟೌನ್ ನಲ್ಲಿರೋ ಕ್ಯಾಥೆಡ್ರೆಲ್ ಸ್ಕ್ವೇರ್ ಅನ್ನು ಈ ಉಡುಗೊರೆಯಲ್ಲಿ ಅನಾವರಣ ಮಾಡಲಾಗಿದೆ. ಇದನ್ನು ತಯಾರಿಸಲು ವಿಜ್ಞಾನಿಗಳಿಗೆ ಮೂರು ತಿಂಗಳು ಬೇಕಾಯ್ತಂತೆ.

ನೈಜ ವಸ್ತುವಿಗಿಂತ ಇದು 10,000 ಪಟ್ಟು ಸಣ್ಣದಾಗಿದೆ. ಮನುಷ್ಯನ ಜೀವಕೋಶಕ್ಕಿಂತ್ಲೂ ಪುಟ್ಟದಾಗಿರುವ ಇದನ್ನು ಬರಿಗಣ್ಣಿನಿಂದ ನೋಡುವುದು ಅಸಾಧ್ಯ. ಇದು ಜಗತ್ತಿನ ಅತಿ ಚಿಕ್ಕ ನೇಟಿವಿಟಿ ಸೀನ್ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ.

ಗಿನ್ನಿಸ್ ದಾಖಲೆಯ ಪುಟ ಸೇರಿದೆ. ಲಿಥುವೇನಿಯಾದ ಅಧ್ಯಕ್ಷರು ಇದನ್ನು ಅಧಿಕೃತವಾಗಿ ಪೋಪ್ ಫ್ರಾನ್ಸಿಸ್ ಅವರಿಗೆ ಉಡುಗೊರೆಯಾಗಿ ಕೊಟ್ಟಿದ್ದಾರೆ. ಲಿಥುವೇನಿಯಾ ಅಧ್ಯಕ್ಷ ಡಾಲಿಯಾ ಗ್ರಿಬೌಸ್ಕೈಟ್ ಇದನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...