alex Certify
ಕನ್ನಡ ದುನಿಯಾ       Mobile App
       

Kannada Duniya

ನಾಲ್ಕು ವರ್ಷದ ಮಗುವಿಗೆ ಜೀವಾವಧಿ ಶಿಕ್ಷೆ..!

kahira-1

ಒಂದುವರೆ ವರ್ಷದ ಮಗು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದೆ ಅಂದ್ರೆ ನೀವು ನಂಬ್ತೀರಾ? ನೀವು ನಂಬಿ ಇಲ್ಲ ಬಿಡಿ ಆದ್ರೆ ಈಜಿಪ್ಟ್ ನ್ಯಾಯಾಲಯ ಇದನ್ನು ನಂಬಿದೆ. ಜೊತೆಗೆ ಮಗುವಿಗೆ ಜೀವಾವಧಿ ಶಿಕ್ಷೆಯನ್ನೂ ವಿಧಿಸಿದೆ.

ದಕ್ಷಿಣ ಕೈರೋ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದ 115 ಆರೋಪಿಗಳ ಪಟ್ಟಿಯಲ್ಲಿ ಈ ಮಗುವಿನ ಹೆಸರು ಕೂಡ ಇತ್ತು. ಆತನ ಹೆಸರು ಮೊಹಮ್ಮದ್. ಈಗ ಆತನ ವಯಸ್ಸು ನಾಲ್ಕು ವರ್ಷ. ವಕೀಲರ ಪ್ರಕಾರ ಪೊಲೀಸ್ ತಪ್ಪಿನಿಂದಾಗಿ ಮೊಹಮ್ಮದ್ ಹೆಸರು ಸೇರಲ್ಪಟ್ಟಿತ್ತು. ಆತನ ವಯಸ್ಸಿನ ಬಗ್ಗೆ ಮನವರಿಕೆ ಮಾಡಿದ್ರೂ ಕೋರ್ಟ್ ಅದಕ್ಕೆ ಸಮ್ಮತಿ ನೀಡಲಿಲ್ಲ.

ಪಶ್ಚಿಮ ಕೈರೋ ಮಿಲಿಟರಿ ನ್ಯಾಯಾಲಯ ಮಗುವಿನ ವಿರುದ್ಧ ನಾಲ್ಕು ಕೊಲೆ, ಎಂಟು ಹತ್ಯೆ ಯತ್ನ, ಆಸ್ತಿ ನಾಶ, ಶಾಂತಿ ಕದಡುವುದು, ಪೊಲೀಸ್ ಹಾಗೂ ಸೈನಿಕರಿಗೆ ಬೆದರಿಕೆ ಹಾಕುವ ಆರೋಪದ ಮೇಲೆ ಜೀವಾವಧಿ ಶಿಕ್ಷೆ ವಿಧಿಸಿದೆ. ಸ್ಥಳೀಯ ಕೋರ್ಟ್ ನಲ್ಲಿ ಮಗುವಿನ ಜನನ ಪ್ರಮಾಣ ಪತ್ರವನ್ನು ನೀಡಲಾಗಿತ್ತು. ಆದ್ರೆ ಕೇಸ್ ಮಿಲಿಟರಿ ನ್ಯಾಯಾಲಯಕ್ಕೆ ಹಸ್ತಾಂತರವಾಯ್ತು. ಆಗ ಜಡ್ಜ್, ಜನನ ದಾಖಲೆಯನ್ನು ಹಸ್ತಾಂತರಿಸಿಲ್ಲ. ನ್ಯಾಯಾಲಯಕ್ಕೆ ಮಗು ಹಾಜರಾಗದ ವೇಳೆ ಶಿಕ್ಷೆ ವಿಧಿಸಲಾಗಿದೆ ಎನ್ನುತ್ತಾರೆ ವಕೀಲರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...