alex Certify
ಕನ್ನಡ ದುನಿಯಾ       Mobile App
       

Kannada Duniya

ಕೊನೆ ಕ್ಷಣದಲ್ಲಿ ದೇವದೂತನಂತೆ ಬಂದ ಸಹೋದ್ಯೋಗಿ ಸ್ನೇಹಿತ

ಮೂರು ಮಕ್ಕಳ ತಂದೆ ಅಮೆರಿಕಾದ ಜೇಸನ್ ಆಂಡರ್ಸನ್ ಮೂತ್ರಪಿಂಡ ಖಾಯಿಲೆಯಿಂದ ಬಳಲುತ್ತಿದ್ದ. ಸಾವಿಗೆ ಹತ್ತಿರವಾಗ್ತಿದ್ದ ಆತ ಬದುಕಿ ಬರುವ ಆಸೆ ಬಿಟ್ಟಿದ್ದ. ಪತ್ನಿ ಹಾಗೂ ವೈದ್ಯರು ಕೂಡ ಕೈಚೆಲ್ಲಿ ಕುಳಿತಿದ್ದರು. ಆಗ ದೇವದೂತನಂತೆ ಬಂದಿದ್ದು ಪತ್ನಿಯ ಸಹೋದ್ಯೋಗಿ.

ಕಿಂಗ್ಸ್ಲಿ ಟಿಯೋ, ಜೇಸನ್ ಹಾಗೂ ಆತನ ಪತ್ನಿ ಮಾತುಗಳನ್ನು ಕೇಳಿದ್ದನು. ಮನಸ್ಸು ಕರಗಿ ಸಹಾಯಕ್ಕೆ ನಿಂತಿದ್ದನು. ವೈದ್ಯರು ಪರೀಕ್ಷೆ ನಡೆಸಿ ಗ್ರೀನ್ ಸಿಗ್ನಲ್ ನೀಡಿದ್ದರು. ಕಿಂಗ್ಸ್ಲಿ ಮೂತ್ರಪಿಂಡ ಜೇಸನ್ ಗೆ ಸರಿಹೊಂದುತ್ತದೆ ಎಂದ್ರು. ಕಿಂಗ್ಸ್ಲಿ, ಸಹೋದ್ಯೋಗಿ ಪತಿಗೆ ಕಿಡ್ನಿ ನೀಡಿ ಅವ್ರ ಕುಟುಂಬಕ್ಕೆ ಮರುಜೀವ ನೀಡಿದ್ದಾನೆ.

40 ವರ್ಷದ ಜೇಸನ್ 30ನೇ ವಯಸ್ಸಿನಲ್ಲಿಯೇ ಮೂತ್ರಪಿಂಡ ಸಮಸ್ಯೆಗೆ ಒಳಗಾಗಿದ್ದನಂತೆ. ನಾಲ್ಕು ವರ್ಷಗಳ ಹಿಂದೆ ಪರಿಸ್ಥಿತಿ ಹದಗೆಟ್ಟಿತ್ತಂತೆ. ಪ್ರತಿ ದಿನ ಡಯಾಲಿಸಸ್ ಮಾಡಿಸಬೇಕಿತ್ತಂತೆ. ದೀರ್ಘ ಕಾಲದಿಂದ ಮೂತ್ರಪಿಂಡ ಸಮಸ್ಯೆ ಎದುರಿಸುತ್ತಿದ್ದ ಜೇಸನ್ ಗೆ ಕಿಡ್ನಿ ದಾನಿಗಳು ಸಿಕ್ಕಿರಲಿಲ್ಲವಂತೆ. ಕೊನೆಗೆ ಕಿಂಗ್ಸ್ಲಿ ದೇವರಂತೆ ಬಂದು ಕಿಡ್ನಿ ನೀಡಿದ ಎನ್ನುತ್ತಾರೆ ಜೇಸನ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...