alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ನೋಡಿ, ಪಾಠ- ಪ್ರಾಕ್ಟಿಕಲ್ ಮೂಲಕವೂ ಲವ್ ಟ್ರೈನಿಂಗ್

love china

ಬೀಜಿಂಗ್: ಓದುವುದು, ಕೇಳುವುದಕ್ಕಿಂತ ನೋಡುವ ಮೂಲಕ, ಪ್ರಾಕ್ಟಿಕಲ್ ಮೂಲಕ ಕಲಿಯುವುದು ಬೇಗ ತಲೆಗೆ ಹೋಗುತ್ತದೆ ಎಂದು ಹೇಳಲಾಗುತ್ತದೆ. ಇದನ್ನೇ ಆಧಾರವಾಗಿಟ್ಟುಕೊಂಡು ಲವ್ ಮಾಡುವುದನ್ನು ಕಲಿಸಲು ವಿಶ್ವ ವಿದ್ಯಾಲಯವೊಂದು ಪ್ರಯತ್ನಿಸಿದೆ.

ಕಾಲೇಜ್ ಮೆಟ್ಟಿಲು ಹತ್ತುವ ಮಕ್ಕಳಿಗೆ ಪ್ರೀತಿ, ಪ್ರೇಮ ಎಂದೆಲ್ಲಾ ಹಾಳಾಗಬೇಡ ಎಂದು ಪೋಷಕರು ಹೇಳುತ್ತಾರೆ. ಅಧ್ಯಾಪಕರು ಪಾಠ ಮಾಡುವಾಗ, ಓದುವ ವಯಸ್ಸಿನಲ್ಲಿ ಲವ್ ಎಂದೆಲ್ಲಾ ತಲೆಕೆಡಿಸಿಕೊಳ್ಳದೇ ಓದಿ ಎಂದು ಸಲಹೆ ನೀಡುತ್ತಾರೆ. ಆದರೆ, ಚೀನಾದ ವಿಶ್ವವಿದ್ಯಾಲಯವೊಂದರಲ್ಲಿ ಲವ್ ಕುರಿತಾದ ವಿಷಯವನ್ನು ಪಠ್ಯದಲ್ಲಿ ಅಳವಡಿಸಲಾಗಿದೆ. ರೋಮ್ಯಾಂಟಿಕ್ ಸಂಬಂಧ ಕುರಿತು ಈ ವಿಶ್ವವಿದ್ಯಾಲಯದಲ್ಲಿ ಥಿಯರಿ ಹಾಗೂ ಪ್ರಾಕ್ಟಿಕಲ್ ತರಗತಿ ಕೂಡ ನಡೆಸಲಾಗುವುದು.

ಟಿಯಾಂಜಿನ್ ವಿಶ್ವವಿದ್ಯಾಲಯದಲ್ಲಿ ಇಂತಹ ಪಠ್ಯವಿದ್ದು, ಪ್ರೀತಿ ಮಾಡುವುದು, ಪರಸ್ಪರ ನಡವಳಿಕೆ ಮೊದಲಾದವುಗಳ ಬಗ್ಗೆ ಹೇಳಿಕೊಡಲಾಗುವುದು. ವಿಷಯದಲ್ಲಿ ವಿದ್ಯಾರ್ಥಿಗಳು ಎಷ್ಟರಮಟ್ಟಿಗೆ ತೊಡಗಿಕೊಳ್ಳುತ್ತಾರೆ ಎಂಬುದರ ಆಧಾರದಲ್ಲಿ ಮಾರ್ಕ್ಸ್ ಕೊಡಲಾಗುತ್ತದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...