alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ಪನಿಗೆ 15, ಮಗನಿಗೆ 5ನೇ ಹುಟ್ಟುಹಬ್ಬ

father, son

ಅಪ್ಪ ಮಕ್ಕಳ ನಡುವೆ ಏನಿಲ್ಲವೆಂದರೂ, ಸುಮಾರು 22 ವರ್ಷ ವಯಸ್ಸಿನ ಅಂತರ ಇರುತ್ತದೆ. ಆದರೆ, ಈ ಅಪ್ಪ ಮಕ್ಕಳ ವಯಸ್ಸಿನ ಅಂತರ ಕೇಳಿದರೆ ಆಶ್ಚರ್ಯ ಪಡುತ್ತೀರಿ. ಮಗನಿಗೆ 5 ವರ್ಷವಾದರೆ, ಅಪ್ಪನಿಗೆ ಕೇವಲ 15 ವರ್ಷ ವಯಸ್ಸು.

ಅರೇ, ಇಷ್ಟು ಕಡಿಮೆ ವಯಸ್ಸಿನ ಅಂತರ ಹೇಗೆ ಸಾಧ್ಯ ಎಂದುಕೊಂಡಿರಾ? ಅಸಲಿಗೆ ಈ ಫೋಟೋದಲ್ಲಿರುವವರು ಅಪ್ಪ- ಮಕ್ಕಳು. ಕ್ಯಾಲಿಫೋರ್ನಿಯಾದಲ್ಲಿರುವ ಲಾ ಮೆಸಾದ ನಿವಾಸಿಯಾಗಿರುವ ಶೇಕ್ ಔಫ್ ಹಾಗೂ ಅವರ ಪುತ್ರನಿಗೆ ಅಸಲಿಗೆ 15 ಹಾಗೂ 5 ವರ್ಷ ವಯಸ್ಸಲ್ಲ. ಅವರ ವಯಸ್ಸು ಕ್ರಮವಾಗಿ 60 ವರ್ಷ ಹಾಗೂ 20 ವರ್ಷ. ಅವರು ಒಂದೇ ದಿನಾಂಕದಂದು ಅಂದರೆ ಫೆಬ್ರವರಿ 29 ರಂದು ಜನಿಸಿದ್ದೆ ಇಂತಹ ಅಪರೂಪದ ಪ್ರಕರಣಕ್ಕೆ ಕಾರಣವಾಗಿದೆ.

ಫೆಬ್ರವರಿ 29 ರಂದು 60 ವರ್ಷದ ಶೇಕ್ ಔಫ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಪ್ರತಿ 4 ವರ್ಷಗಳಿಗೊಮ್ಮೆ ಅವರ ಹುಟ್ಟುಹಬ್ಬ ಬರುವುದರಿಂದ ಇದು ಅವರಿಗೆ 15ನೇ ಹುಟ್ಟುಹಬ್ಬದ ಸಂಭ್ರಮ. ಫೆಬ್ರವರಿ 29ರಂದು ಜನಿಸಿದ 20 ವರ್ಷದ ಅವರ ಪುತ್ರನೂ ಅದೇ ದಿನ ತನ್ನ 5 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...